Advertisement

ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ

01:00 PM May 15, 2021 | Team Udayavani |

ಬೀದರ: ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಮಹಾಮಾನವ ತಾವಾದಿ ಬಸವ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪುಷ್ಪ ನಮನ, ವಚನ ಪಠಣ ಮೂಲಕ ಬಸವಣ್ಣನಿಗೆ ನಮನ ಸಲ್ಲಿಸಲಾಯಿತು.

Advertisement

ನಗರದ ಬಸವೇಶ್ವರ ಪ್ರತಿಮೆ ಬಳಿ ಷಟಸ್ಥಲ ಧ್ವಜಾರೋಹಣವನ್ನು ಸಂಸದ ಭಗವಂತ ಖೂಬಾ ನೆರವೇರಿಸಿದರು. ಬಳಿಕ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ಈ ವೇಳೆ ಮಾತನಾಡಿದ ಸಚಿವ ಚವ್ಹಾಣ, ಬಸವಣ್ಣನ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.  ಕೊರೊನಾ ನಿಯಂತ್ರಿಸಲು ಬಸವಣ್ಣನವರು ನಮಗೆಲ್ಲರಿಗೂ ಶಕ್ತಿ ಕೊಡಲಿ ಮತ್ತು ದಾರಿ ತೋರಲಿ ಎಂದರು.

ಶಾಸಕ ರಹೀಮ್‌ ಖಾನ್‌, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌, ಎಸ್‌ಪಿ ನಾಗೇಶ ಡಿ.ಎಲ್‌, ಕೆಆರ್‌ಐಐಡಿಬಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಈ ವೇಳೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡರು.

ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರು, ಅನಿಲ್‌ ಬೆಲ್ದಾರ್‌, ಸುರೇಶ್‌ ಚನ್ನಶೆಟ್ಟಿ, ರಜನೀಶ ವಾಲಿ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ್‌ ಗಾದಗಿ, ಆನಂದ ದೇವಪ್ಪ, ದೀಪಕ ವಾಲಿ, ರಾಜೇಂದ್ರಕುಮಾರ ಗಂದಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next