Advertisement

ಬಸವಣ್ಣ ವಚನ ಎಲ್ಲರಿಗೂ ಆದರ್ಶ

03:31 PM May 04, 2022 | Team Udayavani |

ಚನ್ನರಾಯಪಟ್ಟಣ: ಮಹಾಪುರುಷರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವುದ ರಿಂದ ದೇಶದ ವ್ಯವಸ್ಥೆ ಸದೃಢವಾಗಿದ್ದು, ವಿಶ್ವದಲ್ಲಿ ಭಾರತ ಅಗ್ರಗಣ್ಯ ಸ್ಥಾನಕ್ಕೆ ಏರುತ್ತಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಬಸವಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುಣ್ಯಭೂಮಿ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಹಲವು ಮಹಾನ್‌ ನಾಯಕರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಇದನ್ನು ಅನುಸರಿಸುವ ಮೂಲಕ ವಿಶ್ವದ ಪ್ರಮುಖ ದೇಶದ ಹೆಸರಿನ ಪಟ್ಟಿ ಯಲ್ಲಿ ಭಾರತವನ್ನು ಕಾಣಬಹುದು ಎಂದರು.

ಬಸವಣ್ಣ ಅವರ ವಚನ ಪ್ರತಿಯೊಬ್ಬರ ಬದುಕಿಗೆ ಆದರ್ಶವಾಗಿದೆ. ಇಂತಹ ವಚನ ಓದುವವರ ಸಂಖ್ಯೆ ಕ್ಷೀಣಸಿತ್ತಿರುವುದಕ್ಕೆ ಮೊಬೈಲ್‌ ಹಾಗೂ ಕಂಪ್ಯೂಟ ರ್‌ ನಂತಹ ತಂತ್ರಜ್ಞಾನ ಕಾರಣ. ಯುವ ಸಮುದಾಯ ಬಸವಣ್ಣನ ವಚನ ಸಾರ ಅರಿಯಿರಿ ಎಂದರು.

ಬ್ರಾಹ್ಮಣನಾಗಿ ಹುಟ್ಟಿ ಸಮಾನತೆ ಸಾರಿದ ಮಹನೀಯ: ಜ್ಯಾತ್ಯತೀವವಾದಿ ಬಸವಣ್ಣ 12ನೇ ಶತಮಾನದಲ್ಲಿ ಅಂತರ ಜಾತಿ ವಿವಾಹ ಮಾಡಿಸಿ ಜಾತಿಯತೆಗೆ ಇತಿಶ್ರೀ ಹೇಳುವ ಪ್ರಯತ್ನ ಮಾಡಿದರು. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದರೂ ಸಾಮಾಜಿಕ ಸಮಾನತೆಗಾಗಿ ವಚನಗಳ ಮೂಲಕ ಎಲ್ಲರನ್ನೂ ಎಚ್ಚರಿಸಿದ ಮಹಾನ್‌ ಮೇದಾವಿ. ಮಠ-ಮಂದಿರ ನಿರ್ಮಾಣದಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ಮಾಡಿದ ಕ್ರಾಂತಿಕಾರಿ ಎಂದು ಹೇಳಿದರು.

Advertisement

ರಾಜ್ಯ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ್‌ ಮಾತನಾಡಿ, ಭಾರತೀಯ ನಾಗರಿಕತೆ ಮೃತ್ಯುಂಜಯ ನಾಗರಿಕತೆ, ಧರ್ಮ ಪ್ರವರ್ಚಕರು ನಡೆದ ದಾರಿಯಲ್ಲಿ ಸಾಗಿದರೆ ಶಾಂತಿ ಹಾಗೂ ನೆಮ್ಮದಿ ನಾಡಾಗಲಿದೆ. 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಆಳ್ವಿಕೆಗೆ ಒತ್ತು ನೀಡಿದರು.

ಇವರು ಹಾಕಿದ ಹಾದಿಯಲ್ಲಿ ಸಂವಿಧಾನ ರಚನೆ ಆಗಿದೆ. ಇಂಗ್ಲೆಂಡ್‌ ದೇಶದಲ್ಲಿ ಬಸವಣ್ಣ ಅವರ ಪ್ರತಿಮೆ ಅನಾವರಣಗೊಂಡಿರುವುದು ಜಾತ್ಯತೀತತೆಗೆ ಹಿಡಿದ ಕನ್ನಡಿ ಎಂದು ಸ್ಮರಿಸಿದರು.

ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎನ್‌.ಪರಮೇಶ್‌, ಕಾರ್ಯದರ್ಶಿ ನಂದೀಶ್‌, ತಹಶೀಲ್ದಾರ್‌ ಗೋವಿಂದರಾಜ್‌, ಪುರಸಭಾಧ್ಯಕ್ಷ ಸುರೇಶ್‌, ಉಪಾಧ್ಯಕ್ಷ ಧರಣೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಕಸಾಪ ಅಧ್ಯಕ್ಷ ಎಚ್‌.ಎನ್‌. ಲೋಕೇಶ್‌ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next