Advertisement

ಬಸವ ಬ್ಯಾಂಕ್‌: ಸಸಿ ವಿತರಿಸಿ ಸ್ವಾತಂತ್ರ್ಯ ದಿನಾಚರಣೆ

10:28 AM Aug 16, 2019 | Suhan S |

ಬಾಗಲಕೋಟೆ: ಶತಮಾನ ಕಂಡಿರುವ ಉತ್ತರ ಕರ್ನಾಟಕದ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್‌ನ ಪ್ರಧಾನ ಕಚೇರಿ ಆಚರಣದಲ್ಲಿ ಸ್ವಾತಂತ್ರ್ಯ ದಿನವನ್ನು ಸಸಿ ವಿತರಿಸುವ ಮೂಲಕ ಆಚರಿಸಲಾಯಿತು.

Advertisement

ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿರಿಯರ ತ್ಯಾಗ-ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಅರ್ಥಪೂರ್ಣ ಆಚರಿಸೋಣ. ದೇಶದ ಉನ್ನತಿಗಾಗಿ, ರಾಷ್ಟ್ರದ ಜಾಗ್ರತಿಗಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡೋಣ. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿರಬೇಕು. ಪ್ರವಾಹದ ಸಂತ್ರಸ್ತರ ನೆರವಿಗೆ ಜನರು ಧಾವಿಸಬೇಕು ಎಂದು ಹೇಳಿದರು.

ಬಸವೇಶ್ವರ ಸಹಕಾರಿ ಬ್ಯಾಂಕ್‌ನಿಂದ ಸಂತ್ರಸ್ತರಿಗೆ ದಿನಸಿ ಸಾಮಾನುಗಳಾದ ಸಕ್ಕರೆ, ಚಹಾಪುಡಿ, ಲಡಕಿ ಉಂಡಿ, ಖಾರ ಮತ್ತು ಬಿಸ್ಕೀಟ ಮುಂತಾದವುಗಳನ್ನು ಸುಮಾರು ಎರಡು ಸಾವಿರ ಸಂತ್ರಸ್ತರಿಗೆ ವಿತರಿಸಿದರು. ಇದೇ ವೇಳೆ ಸಿಬ್ಬಂದಿಗಳಿಗೆ ಅಧ್ಯಕ್ಷರು ಸಸಿಗಳನ್ನು ವಿತರಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕ ಸಿ.ಟಿ. ಪಾಟಿಲ, ಎಂ.ಎಸ್‌. ಏಳೆಮ್ಮಿ, ಎಸ್‌.ಎಸ್‌. ಕಂಕಣಮೇಲಿ, ಆರ್‌.ಎಸ್‌. ದಂಡನ್ನವರ, ಆರ್‌.ವೈ. ಪಟ್ಟಣದ, ವೀರಪ್ಪ ವಿ. ಶಿರಗನ್ನವರ, ಎಸ್‌.ಡಿ. ಶಿರೂರ, ಎಸ್‌.ಪಿ. ಮುಳಗುಂದ, ಎಸ್‌.ಸಿ. ಆರಬ್ಬಿ, ಎಂ.ಎಸ್‌. ಜೋಳದ, ಎಸ್‌.ಟಿ. ಬಳ್ಳಾರಿ, ಎಸ್‌.ಸಿ. ನಂದಿಕೋಲಮಠ, ಎಚ್.ಎಸ್‌. ರಾಠೊಡ, ವಿ.ವಿ. ಕಲಬುರ್ಗಿ, ಎನ್‌.ಆರ್‌. ಕುಲಕರ್ಣಿ, ಎಂ.ಆರ್‌. ಗೌಡರ, ಪ್ರಧಾನ ವ್ಯವಸ್ಥಾಪಕ ಎಂ.ಎಚ್. ಕಳ್ಳಿಗುಡ್ಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next