Advertisement

ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ: ಯತ್ನಾಳ

06:30 PM Dec 07, 2022 | Team Udayavani |

ವಿಜಯಪುರ: ನಾಳೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶದ ಬಳಿಕ ಮೋದಿ ಅವರು ಕರ್ನಾಟಕದ ಕಡೆ ಚಿತ್ತಹರಿಸಲಿದ್ದಾರೆ. ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಮಾದರಿ ಅನುಸರಿಸಿದರೂ ಆಶ್ಚರ್ಯವಿಲ್ಲ ಎಂದು ಆರು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದ ಕುರಿತು ಇದೀಗ ಚರ್ಚೆ ನಡೆಯುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಇದನ್ನು ಹೇಳಿದ್ದೆ. ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಬದಲಾವಣೆ ಬಯಸಿದರೂ ನನ್ನ ಸಹಮತವಿದೆ ಎಂದರು.

ಕರ್ನಾಟಕದ ಪ್ರತಿ ವಿಧಾನಸಭೇ ಕ್ಷೇತ್ರದ ಪ್ರತಿ ಶಾಸಕರ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇದ್ದು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಚುನಾವಣೆಗೆ ಏನೆಲ್ಲ ಬೇಕು, ಯಾವೆಲ್ಲ ಬದಲಾವಣೆ ಮಾಡಬೇಕು ಎಂಬುದನ್ನು ಕೇಂದ್ರದ ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದರು.

ನಮ್ಮ ಹೈಕಮಾಂಡ್ ಸಾಕಷ್ಟು ಸಮೀಕ್ಷೆಗಳನ್ನು ಮಾಡಿಸಿ, ಯಾವ ಯಾವ ಸಚಿವರು, ಶಾಸಕರ ಪರಿಸ್ಥಿತಿ ಏನಿದೆ ಎಂಬುದರ ಮಾಹಿತಿ ಸಂಗ್ರಹಿಸಿರುತ್ತದೆ. ಇದರ ಆಧಾರದಲ್ಲಿ ಕೇಂದ್ರದ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೂ ಎಲ್ಲರೂ ಬದ್ಧವಾಗಿರಬೇಕಾಗುತ್ತದೆ ಎಂದರು.

ಮಹಾ ನಾಯಕರ ವರ್ತನೆಗೆ ಕಿಡಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕರ್ನಾಟಕದ ಗಡಿ ವಿಷಯ ಪ್ರಸ್ತಾಪಿಸಿ, ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ಶಿವಸೇನೆ, ಎಂಇಎಸ್ ಮಾತ್ರವಲ್ಲ ಮಹಾರಾಷ್ಟ್ರ ಬಿಜೆಪಿ ನಾಯಕರು ಚುನಾವಣೆ ಹಾಗೂ ಮತಬ್ಯಾಂಕ್ ರಾಜಕೀಯಕ್ಕಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಇಂಥ ಕ್ಷುಲ್ಲಕ ಕೆಲಸ ಮಾಡುತ್ತಾರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Advertisement

ರಾಜ್ಯದ ಗಡಿ ವಿಷಯದಲ್ಲಿ ಪದೇ ಪದೇ ಅನಗತ್ಯವಾಗಿ ಖ್ಯಾತೆ ತೆಗೆಯುವ ಮಹಾರಾಷ್ಟ್ರ ರಾಜ್ಯದ ವರ್ತನೆಗೆ ಕಿಡಿ ಕಾರಿದ ಯತ್ನಾಳ, ತಾನೇ ಬಯಸಿದ್ದ ಮಹಾಜನ್ ಆಯೋಗದ ವರದಿಯನ್ನು ಮಹಾರಾಷ್ಟ್ರ ಒಪ್ಪದೇ ಅನಗತ್ಯವಾಗಿ ತಂಟೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿರುವ ಭಾರತದಲ್ಲಿ ಶಾಂತಿಯಿಂದ ಇರುವ ಇಚ್ಛೆ ಮಹಾರಾಷ್ಟ್ರ ರಾಜಕೀಯ ನಾಯಕರಿಗೆ ಬೇಕಿಲ್ಲ. ಈ ಕಾರಣಕ್ಕೆ ಗಡಿ ವಿಷಯದಲ್ಲಿ ಪದೇ ಪದೇ ಮರಾಠಿ-ಕನ್ನಡ ಅಂತೆಲ್ಲ ಕ್ಷುಲ್ಲಕ ವಿಷಗಳನ್ನು ಕೆದಕಿ ವಿವಾದ ಹುಟ್ಟುಹಾಕಿ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ ಎಂದು ಹರಿಹಾಯ್ದರು.

ನಟ ಚೇತನ ವಿರುದ್ಧ ವಾಗ್ದಾಳಿ: ವಿಜಯಪುರ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಷಯದಲ್ಲಿ ಪಂಚಮಸಾಲಿ ಸಮುದಾಯ ಕೆಲವು ವ್ಯಕ್ತಿಗಳು ನಕಲಿ ಹೋರಾಟ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಸಿದ್ಧಾಂತವೇ ಗೊತ್ತಿಲ್ಲದ, ಹಾದಿಬೀರಿಯಲ್ಲಿ ಹೋಗೋಚೇತನ ಎಂಬ ತಿಳಿಗೇಡಿ ಹಾಗೂ ನಮ್ಮ ದೇಶದನೇ ಅಲ್ಲದಂತೆ ವರ್ತಿಸುವ ಚಿತ್ರನಟನ ಬಗ್ಗೆ ಮಾತನಾಡದೆ ಇರೋದೇ ಒಳ್ಳೆಯದು ಎಂದು ಕಿಡಿ ಕಾರಿದರು.

ಈ ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನ ಮುಚ್ಚಿಟ್ಟಿದ್ದೆ ದುರಂತ. ಅಂಬೇಡ್ಕರ್ ಅವರ ಜೀವನ ಮತ್ತು ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕಿದೆ. ಕೆಲ ಜನರು ತಮ್ಮ ಉಪಜೀವನಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ.

ದಿ ಪಾರ್ಟಿಶನ್ ಆಫ್ ಪಾಕಿಸ್ತಾನ ಎಂಬ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಭಾರತ ಇಬ್ಬಾಗಬೇಕಾದರೆ ಇಲ್ಲಿರುವ ಅನ್ಯ ಧರ್ಮೀಯರನ್ನು ಸಹೋದರರಂತೆ ನೋಡುವ ಮನಸ್ಥಿತಿ ಇಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿರುವ ಹಿಂದೂಗಳು ಭಾರತಕ್ಕೆ ಬರಬೇಕು ಎಂದು ಬರೆದಿದ್ದಾರೆ ಎಂದರು.

ಕೆಲ ರೋಲ್ ಕಾಲ್ ಲೀಡರ್‍ಗಳು ದಲಿತ-ಮುಸ್ಲಿಂ ಎಂದು ಹೇಳಿ ಜೀವನ ಮಾಡುತ್ತಾರೋದು ದುರಂತ. ಅಂಬೇಡ್ಕರ್ ಅವರ ವಿಚಾರ, ಅವರ ಸಂಕಷ್ಟದ ಜೀವನದ ಕುರಿತು ಅರಿಯದವರು ಅಂಬೇಡ್ಕರ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾ ಅನಗತ್ಯವಾಗಿ ಹೇಳಿಕೆ ಕೊಡುವ ಮೂಲಕ ದೊಡ್ಡವರಾಗಲು ಬಯಸುತ್ತಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ : ಕ್ಯಾಚ್‌ ಹಿಡಿಯಲು ಯತ್ನ : ಹೆಬ್ಬೆರಳಿಗೆ ಗಾಯವಾಗಿ ರೋಹಿತ್‌ ಶರ್ಮಾ ಆಸ್ಪತ್ರೆಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next