Advertisement

“ಬ್ಯಾರಿ ಭಾಷೆ ಸಂರಕ್ಷಣೆಗೆ ಕಾರ್ಯನಿರ್ವಹಿಸಿ’

10:39 PM Apr 20, 2019 | Sriram |

ಮಹಾನಗರ: ಬ್ಯಾರಿ ಭಾಷೆ,ಸಾಹಿತ್ಯ,ಸಂಸ್ಕೃತಿ ಸಂರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ಮಾಜಿ ಮೇಯರ್‌ ಅಶ್ರಫ್‌ ಹೇಳಿದರು.

Advertisement

ಇಮಾಂ ಗಝಾlಲಿ ಫೌಂಡೇಶನ್‌ ಮಂಗಳೂರು ಇದರ ಆಶ್ರಯದಲ್ಲಿ ಸ್ಟೇಟ್‌ಬ್ಯಾಂಕ್‌ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಶುಕ್ರವಾರ ನಡೆದ ಬಿಸೆಲಿಲ್‌ ಬೀತಿಯೊ ಕಲ್ತಪ್ಪ ಪಿನ್ನೆ ಚಾಯ ಮತ್ತು ನೋಂಬುಗು ಮರ್‌ಹಬ ಲೇಸ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರಾವಳಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿ ಜಾಲ್‌ ಮಾತನಾಡಿ, ಬ್ಯಾರಿ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಬ್ಯಾರಿ ಅಕಾಡೆಮಿ, ಅಧ್ಯಯನ ಪೀಠ ಮತ್ತು ಶಬ್ದಕೋಶ ಮಹತ್ತರ ಕೊಡುಗೆಯಾಗಿದೆ. ಇದರಿಂದ ಬ್ಯಾರಿ ಭಾಷೆಯ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಬ್ಯಾರಿ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಾವೆಲ್ಲ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದರೆ ಬ್ಯಾರಿ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಕವನ ವಾಚನ,ಉಪನ್ಯಾಸ
ಯು.ಎ. ಖಾಸಿಂ ಉಳ್ಳಾಲ, ಮಹ ಮ್ಮದ್‌ ಅಲಿ ಮಾತನಾಡಿದರು. ಹುಸೈನ್‌ ಕಾಟಿಪಳ್ಳ, ಹಸನಬ್ಬ ಮೂಡುಬಿದಿರೆ ಕವನ ವಾಚಿಸಿದರು. ಶೇಖ್‌ ಮಹಮ್ಮದ್‌ ಇರ್ಫಾನಿ ಉಪವಾಸದ ಮಹತ್ವದ ಬಗ್ಗೆ ಉಪದೇಶ ಮಾಡಿದರು.

ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಇಮಾಂ ಗಝಾಲಿ ಫೌಂಡೇಶನ್‌ನ ಅಧ್ಯಕ್ಷ ಆರೀಸ್‌ ತೋಡಾರ್‌, ಅಬ್ದುಲ್‌ ಖಾದರ್‌ ಕುತ್ತೆತ್ತೂರು, ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಿ.ಎಂ. ಮುಸ್ತಫಾ, ಉಪಮೇಯರ್‌ ಮಹಮ್ಮದ್‌ ಕುಂಜತ್ತಬೈಲ್‌, ಮುಸ್ಲಿಂ ಒಕ್ಕೂಟದ ಸದಸ್ಯ ಯು. ಮಹಮ್ಮದ್‌ ಹನೀಫ್‌, ಮುಸ್ಲಿಂ ಸೆಂಟ್ರಲ್‌ ಕಮಿಟಿ ಕಾರ್ಯದರ್ಶಿ ಮಹಮ್ಮದ್‌ ಬಪ್ಪಳಿಗೆ, ಕಾಂಗ್ರೆಸ್‌ ಮುಖಂಡ ಅಬ್ದುಲ್‌ ರಹ್ಮಾನ್‌ ಭಟ್ಕಳ್‌ ಮೊದಲಾದವರು ಉಪಸ್ಥಿತರಿದ್ದರು. ಯೂಸುಫ್‌ ವಕ್ತಾರ್‌ ಅವರು ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next