ಬ್ರಹ್ಮಾವರ: ಐದು ಜಿಲ್ಲೆಗಳ ಪ್ರತಿನಿಧಿಗಳ ಆಡಳಿತ ಮಂಡಳಿ ಹೊಂದಿದ ಕಚ್ಚಾರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ ಕ್ಷೇತ್ರ ಧಾರ್ಮಿಕತೆಯೊಂದಿಗೆ ಶೈಕ್ಷಣಿಕವಾಗಿ ಬೆಳಗಲಿ ಎಂದು ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ರವಿವಾರ ಕಚ್ಚಾರು ಜಾತ್ರಾ ಮಹೋತ್ಸವ ಸಂದರ್ಭ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ವಿತರಣ ಸಮಾರಂಭ ಉದ್ಘಾಟಿಸಿ ಮಾತ ನಾಡಿದರು.
ಕಚ್ಚಾರು ಎಲ್ಲ ಬಬ್ಬುಸ್ವಾಮಿ ದೈವಸ್ಥಾನಗಳ ಸಂಪರ್ಕ ಕೊಂಡಿಯಾಗಿದೆ. ಭಕ್ತರ, ಆಡಳಿತ ಮಂಡಳಿಯ ಸಹಕಾರ
ದಿಂದ ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಧರ್ಮ ರಕ್ಷಣೆ ಸಂಸ್ಕೃತಿ ಇದ್ದಲ್ಲಿ ಧರ್ಮ ಉಳಿಯುತ್ತದೆ. ನಾವು ಧರ್ಮವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಸಂಘಟಿತ ಪ್ರಯತ್ನ, ಮಹಿಳೆಯರ ಕೊಡುಗೆಯಿಂದ ಸಂಸ್ಕೃತಿ ಸಂಪ್ರದಾಯ ಉಳಿಯಲು ಸಾಧ್ಯ ಎಂದು ಉದ್ಯಮಿ ಬೆಳ್ವೆ ವಸಂತ್ ಕುಮಾರ್ ಶೆಟ್ಟಿ ಹೇಳಿದರು.
ಆಡಳಿತ ಮಂಡಳಿ ಅಧ್ಯಕ್ಷ ಗೋಕುಲ್‌ದಾಸ್ ಬಾರಕೂರು ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ. ರಘುಪತಿ ಭಟ್, ಗಣ್ಯರಾದ ರಾಘವೇಂದ್ರ ಕಾಂಚನ್, ಪುರುಷೋತ್ತಮ ಪಿ.ಕೆ., ಸುಧೀರ್ ಕುಮಾರ್ ಶೆಟ್ಟಿ, ಶಾಂತಾರಾಮ ಶೆಟ್ಟಿ ಬಾರಕೂರು, ಎಂ.ಕೆ. ಕುಮಾರ್ ಮಲ್ಪೆ, ಎಲ್ಲಪ್ಪ ಮುಕ್ಕ, ಶಂಕರ ಮಾಸ್ತರ್ ಗೋಳಿಜಾರು, ಬೇಬಿ ಬಿ. ಅಂಬಲಪಾಡಿ, ಗಂಗಾಧರ ಉಡುಪಿ, ಕೆ. ಶೇಖರ ಮಂಗಳೂರು, ಪ್ರಭಾಕರ್ ಹಾರಾಡಿ, ರಾಮಚಂದ್ರನ್ ಬಿಜೈ, ಸುಬ್ರಹ್ಮಣ್ಯ ಪ್ರಸಾದ್ ಮೂಲ್ಕಿ, ಉದಯ ಕುಮಾರ್ ಮುಕ್ಕ, ನವೀನ್ ಚಂದರ್ ಮೂಳೂರು, ಶ್ರೀನಾಥ್ ಮೂಲ್ಕಿ, ಸಚಿನ್ ಜೆ.ಎ. ಉಡುಪಿ, ಶಂಕರ ಬಂಟಕಲ್ಲು, ಶಿವರಾಜ್ ಮಲ್ಲಾರ್, ರಘುರಾಜ್ ಕದ್ರಿ, ಲಕ್ಷ್ಮಣ್ ಚಿಕ್ಕಮಗಳೂರು, ರಾಜು ತೀರ್ಥಹಳ್ಳಿ, ಸುಧಾಕರ್ ಗೋಕಾಕ್, ವಿರೂಪಾಕ್ಷ ಬಿ. ಸಿದ್ಧಾಪುರ, ಸಂತೋಷ್ ಕುಮಾರ್ ಯು. ಮಂಗಳೂರು, ಜೀವನ್ ಕುಮಾರ್ ಪಾಳೆಕಟ್ಟೆ, ಮಂಜು ಕಾಳವರ್, ಪ್ರದೀಪ್ ಬಾಬುಗುಡ್ಡ, ವಿವಿಧ ಬಬ್ಬುಸ್ವಾಮಿ ದೈವಸ್ಥಾನಗಳ ಗುರಿಕಾರರು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಹಾಯಧನ ವಿತರಿಸಲಾಯಿತು. ಆಡಳಿತ ಮಂಡಳಿ ಗೌರವಾಧ್ಯಕ್ಷ ಚೆನ್ನಪ್ಪ ಮೂಲ್ಕಿ, ಖಜಾಂಚಿ ರಘುರಾಮ್ ಪುತ್ತೂರು, ಗುರಿಕಾರ ಕಮಲಾಕ್ಷ ಬಾರಕೂರು, ಅರ್ಚಕ ಪ್ರಭಾಕರ ಕಚ್ಚಾರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ಸ್ವಾಗತಿಸಿ, ಪ್ರೇಮನಾಥ್ ಜಿ. ಕಾರ್ಯಕ್ರಮ ನಿರೂಪಿಸಿದರು.