Advertisement

ಲಯೋನೆಲ್‌ ಮೆಸ್ಸಿ ಮತ್ತೆ ಬಾರ್ಸಿಲೋನಾಕ್ಕೆ?

10:52 PM May 15, 2023 | Team Udayavani |

ಬ್ಯೂನಸ್‌ ಐರಿಸ್‌: ವಿಶ್ವವಿಖ್ಯಾತ ಫ‌ುಟ್ಬಾಲಿಗ, ಆರ್ಜೆಂಟೀನ ವಿಶ್ವಕಪ್‌ ವಿಜೇತ ತಂಡದ ನಾಯಕ ಲಯೋನೆಲ್‌ ಮೆಸ್ಸಿ ಸದ್ಯ ಲೀಗ್‌ ಹಂತದಲ್ಲಿ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಪರ ಆಡುತ್ತಿದ್ದಾರೆ. ಅವರು ಅದನ್ನು ತೊರೆದು ಮತ್ತೆ ತಮ್ಮ ಹಿಂದಿನ ತಂಡ ಬಾರ್ಸಿಲೋನಾವನ್ನು ಕೂಡಿಕೊಳ್ಳುವರೇ? ಹೌದು, ಅದಕ್ಕೆ ನಾವು ಗರಿಷ್ಠ ಪ್ರಯತ್ನ ಹಾಕುತ್ತೇವೆಂದು ಬಾರ್ಸಿಲೋನಾ ಕ್ಲಬ್‌ ಅಧ್ಯಕ್ಷ ಜೋನ್‌ ಲಾಪೊರ್ಟ ಹೇಳಿದ್ದಾರೆ.

Advertisement

ಇತ್ತೀಚೆಗೆ ಪಿಎಸ್‌ಜಿ ಮತ್ತು ಮೆಸ್ಸಿ ನಡುವಿನ ಸಂಬಂಧ ಹಳಸಿದೆ. ಹೇಳದೆ ಕೇಳದೆ ಸೌದಿ ಅರೇಬಿಯಕ್ಕೆ ಹೋಗಿ ಬಂದಿದ್ದಾರೆಂದು ಮೆಸ್ಸಿ ಅವರನ್ನು ಕೆಲವು ಪಂದ್ಯಗಳ ಮಟ್ಟಿಗೆ ಪಿಎಸ್‌ಜಿ ನಿಷೇಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next