Advertisement
ಕೈ ಚೆನ್ನಾಗಿ ತೊಳೆದುಕೊಳ್ಳಿ, ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಗಳನ್ನು ಮೀಸಲಾಗಿಡಿ, ಸೋಂಕು ಧೃಢಪಟ್ಟರೆ ಸ್ಥಳೀಯ ಆರೋಗ್ಯ ಕಾರ್ಯಕರ್ತರ ಮಾತನ್ನು ಗಮನವಿಟ್ಟು ಕೇಳಿ, ಎಲ್ಲಕ್ಕಿಂತ ಮುಖ್ಯವಾಗಿ ಸಮಾಧಾನವಾಗಿರಿ, ಗಾಬರಿಪಡಬೇಡಿ, ಎಂದು ಬರಾಕ್ ಒಬಾಮ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.
Related Articles
Advertisement
ಕೊರೊನಾ ಸೋಂಕಿನಿಂದ ಈಗಾಗಲೇ ಅಮೆರಿಕಾದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇ ಏರಿದೆ. ಒಟ್ಟಾರೆ 130 ಮಂದಿಯಲ್ಲಿ ಸೋಂಕು ಇರುವುದು ಧೃಢಪಟ್ಟಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಅಮೆರಿಕಾದ ಕಾಂಗ್ರೆಸ್ 8 ಶತಕೋಟಿ ಡಾಲರ್ ನೀಡಲು ಒಪ್ಪಿಕೊಂಡಿತ್ತು.
ಏತನ್ಮಧ್ಯೆ ಇಟಲಿಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 107ಕ್ಕೇ ಏರಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 28 ಜನರು ಬಲಿಯಾಗಿದ್ದಾರೆ. ಹಾಗಾಗಿ ಇಟಲಿಯಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.