Advertisement

ನಮ್ಮ ಭೂಮಿಯಲ್ಲಿ ಪಾಪು ಬಾಪು ನಾಟಕ

01:45 AM Dec 07, 2018 | Karthik A |

ಕುಂದಾಪುರ: ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಕಾರದೊಂದಿಗೆ ಗಾಂಧಿ-150 ಕಾರ್ಯಕ್ರಮದ ರಂಗ ಪಯಣದಲ್ಲಿ ಬೊಳುವಾರರ ಪಾಪು ಗಾಂಧಿ ಗಾಂಧಿ ಪಾಪು ಆದ ಕಥೆಯ ಕಾದಂಬರಿಯ ರೂಪಾಂತರ ಡಾ| ಶ್ರೀಪಾದ ಭಟ್‌ ನಿರ್ದೇಶನದ ಪಾಪು ಬಾಪು ನಾಟಕ ಪ್ರದರ್ಶನ ಕುಂದಾಪುರದ ನಮ್ಮ ಭೂಮಿಯಲ್ಲಿ ನಡೆಯಿತು.

Advertisement

ನಾರ್ವೆ ದೇಶದ ಪ್ರಜೆ ಕ್ಷಿತಿಲ್‌ ಉತ್ನೆ, ಸಿಡಬ್ಲ್ಯೂಸಿಯ ನಿರ್ದೇಶಕಿ ಕವಿತಾರತ್ನಾ, ನಮ್ಮ ಭೂವಿಯ ಮಕ್ಕಳ ಪಂಚಾಯತ್‌ ಅಧ್ಯಕ್ಷೆ ವಿನುತ, ರಂಗ ಪಯಣ ತಿರುಗಾಟ ತಂಡದ ನಿರ್ವಾಹಕ ಮಧ್ವರಾಜ್‌, ಉಡುಪಿ ಜಿಲ್ಲಾ ಸಂಚಾಲಕ ಪೃಥ್ವಿನ್‌ ಹಾಗೂ ನಮ್ಮ ಭೂಮಿಯ ಸಹಾಯಕ ನಿರ್ದೇಶಕ ಟಿ. ಶಿವಾನಂದ ಶೆಟ್ಟಿ ಅವರ ಸಮಕ್ಷಮದಲ್ಲಿ ಹೂವಿನ ಕುಂಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಬಳಿಕ ರಾಜ್ಯದ ಬೇರೆ ಬೇರೆ ತಂಡಗಳ ಆಯ್ದ ಕಲಾವಿದರು ಪಾಪು ಬಾಪು ನಾಟಕವನ್ನು ಗಾಂಧಿ ತತ್ವದ ಪ್ರತಿಬಿಂಬ ಎಂಬಂತೆ ಅಭಿನಯಿಸಿದರು. ನಂತರ ನಡೆದ ಸಂವಾದದಲ್ಲಿ ನಮ್ಮ ಭೂಮಿಯ ಸಂಸ್ಥಾಪಕರಲ್ಲೊಬ್ಬರಾದ ಗಣಪತಿ ಎಂ.ಎಂ., ನಮ್ಮ ಸಭಾದ ಬೇಬಿ ಕನ್ಯಾನ ಮತ್ತಿತರರು ಪಾಲ್ಗೊಂಡು ಗಾಂಧಿ ಚಿಂತನೆಗೆ ಧ್ವನಿಯಾದರು. ನಮ್ಮ ಭೂಮಿಯ ರಾಮಾಂಜಿ  ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next