Advertisement

ಬಪ್ಪಳಿಗೆ: ಮಯ್ಯತ್‌ ಪರಿಪಾಲನ ಕೊಠಡಿಗೆ ಶಿಲಾನ್ಯಾಸ

02:50 PM Mar 21, 2017 | Team Udayavani |

ಬಪ್ಪಳಿಗೆ: ಮಯ್ಯತ್‌ ಪರಿಪಾಲನಕ್ಕೆ ನಿರ್ಮಿಸಲಾಗುತ್ತಿರುವ ಕೊಠಡಿಗೆ ಬಪ್ಪಳಿಗೆ ಮಸ್ಜಿದ್‌ನೂ°ರ್‌ ಮಸೀದಿ ಸಭಾಂಗಣದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.

Advertisement

ಅನ್ಸಾರುಲ್‌ ಇಸ್ಲಾಂ ಯುವಕ ಸಮಿತಿ ಆಶ್ರಯದಲ್ಲಿ ಬಪ್ಪಳಿಗೆ ಮಸಿcದ್‌ನೂ°ರ್‌ ಮಸೀದಿ ಕಮಿಟಿ ಹಾಗೂ ಬಪ್ಪಳಿಗೆ ಮುಸ್ಲಿಂ ಯುವಕರ ಸಹಕಾರದೊಂದಿಗೆ ನಿರ್ಮಿಸುತ್ತಿರುವ ಕಟ್ಟಡಕ್ಕೆ ಪುತ್ತೂರು ಮುದರ್ರಿಸ್‌ ಅಸ್ಸಯ್ಯದ್‌ ಅಹಮ್ಮದ್‌ ಪೂಕೋಯ ತಂšಳ್‌ ಶಿಲಾನ್ಯಾಸ ನೆರವೇರಿಸಿ ಶುಭಕೋರಿದರು. ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಮೃತಪಟ್ಟ ಮುಸ್ಲಿಮ ಹಾಗೂ ಅನಾಥ ಮುಸ್ಲಿಂರ ಮೃತದೇಹವನ್ನು ತಂದು ಇಸ್ಲಾಂಮಿನ ವಿಧಿ ವಿಧಾನದಂತೆ ಶುದ್ಧೀಕರಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಪರಿಪಾಲನೆಯನ್ನು ಬಪ್ಪಳಿಗೆಯ ಯುವಕರು ಮಾಡುತ್ತಿದ್ದಾರೆ. ಅದಕ್ಕಾಗಿ ಈಗಿನ ಕೊಠಡಿಯಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ವಿಶಾಲವಾದ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲಾ ವಕ್‌³ ಸದಸ್ಯ ಪಿ.ಬಿ. ಹಸನ್‌ ಹಾಜಿ, ಬಪ್ಪಳಿಗೆ ಮಸ್ಜಿದ್‌ನೂ°ರ್‌ ಮಸೀದಿ ಕಮಿಟಿಯ ಅಧ್ಯಕ್ಷ ಅಬ್ದುಲ್‌ ಹಮೀದ್‌, ಮಸೀದಿಯ ಖತೀಬ್‌ ರಫೀಕ್‌ ಫೈಝಿ ಪುತ್ತೂರು ಅನ್ಸಾರುದ್ದೀನ್‌ ಜಮಾಅತ್‌ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಲ್‌.ಟಿ. ಅಬ್ದುಲ್‌ ರಝಾಕ್‌ ಹಾಜಿ, ಬಪ್ಪಳಿಗೆ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ವಿ.ಕೆ. ಶರೀಫ್, ಮಾಜಿ ಅಧ್ಯಕ್ಷ ಕೆ.ವೈ.ಪಿ. ಯುಸೂಫ್ ಹಾಜಿ,  ಫಾರೂಕ್‌ ಬಪ್ಪಳಿಗೆ, ಬಿ.ಎಚ್‌. ಮುಹಮ್ಮದ್‌ ಬಪ್ಪಳಿಗೆ, ಇಕ್ಬಾಲ್‌ ಯು.ಕೆ., ಸಿದ್ದೀಕ್‌, ರಝಾಕ್‌, ಝಬೈರ್‌ ಯು.ಕೆ. ಅನ್ಸಾರುಲ್‌ ಇಸ್ಲಾಂ ಯುವಕ ಸಮಿತಿ ಬಪ್ಪಳಿಗೆ ಇದರ ಅಧ್ಯಕ್ಷ ಶಾಫಿ ಕೆ.ವೈ.ಪಿ. ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಯು.ಕೆ., ಮದ್ರಸ ಮ್ಯಾನೇಜ್‌ಮೆಂಟ್‌ ಅಧ್ಯಕ್ಷ ಝಾಕೀರ್‌ ಹನೀಫ್ ಕಲ್ಲೇಗ, ಶಮೀ ಬಪ್ಪಳಿಗೆ, ನೂರುದ್ದೀನ್‌ ಬಪ್ಪಳಿಗೆ, ಸವಾದ್‌ ಬಪ್ಪಳಿಗೆ, ಸವಾದ್‌ ಕರ್ಕುಂಜ, ರಝಾಕ್‌ ಬಿ.ಎಚ್‌. ಬಪ್ಪಳಿಗೆ, ಶಾಫಿ ಗಡಿಪ್ಪಿಲ, ಮೋನು ಬಪ್ಪಳಿಗೆ, ನಾಸೀರ್‌ ಬಪ್ಪಳಿಗೆ, ಮರ್ಶದ್‌ ಕರ್ಕುಂಜ, ಬಿ.ಕೆ.ಶರೀಫ್, ಜುಬೈರ್‌ ಯು.ಕೆ. ಸಮೀರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next