Advertisement
ಮೊಡಕಾನದ ಬಿ.ಎಲ್. ಮೂರ್ತಿ ಅವರ ಮನೆಯ ಮೇಲಕ್ಕೆ ಬೆಳಗ್ಗೆ 10ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಬೃಹತ್ ಗಾತ್ರದ ಆಲದ ಮರ ಉರುಳಿ ಬಿದ್ದಿತು. ಮನೆಯ ಒಳಗಿದ್ದವರು ಭಯದಿಂದ ಹೊರ ಗೋಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಸಡಿಲವಾಗಿದ್ದುದು ಹಾಗೂ ಬೇರು ಶಿಥಿಲವಾಗಿರುವುದೇ ಮರ ಉರುಳಿ ಬೀಳಲು ಕಾರಣ. ಬೆಳಗಿ ನಿಂದ ಸತತವಾಗಿ ಮಳೆ ಸುರಿಯು ತ್ತಿದ್ದುದ ರಿಂದ ಕಾರ್ಯಾಚರಣೆಗೆ ಅಡ್ಡಿ ಯಾಯಿತಾದರೂ ಕ್ರೇನ್ ಮೂಲಕ ಮರವನ್ನು ತೆರವುಗೊಳಿಸಲಾಯಿತು. ಅಗ್ನಿ ಶಾಮಕ ಸಿಬಂದಿಯೊಂದಿಗೆ ಸಮೀಪದ ಮರದ ಮಿಲ್ಲಿನ ಕಾರ್ಮಿಕರು ಮರದ ಟೊಂಗೆಗಳನ್ನು ಕಡಿಯಲು ಸಹಕರಿಸಿದರು.
Related Articles
ಘಟನಾ ಸ್ಥಳಕ್ಕೆ ಶಾಸಕ ಮೊದಿನ್ ಬಾವಾ, ಮೇಯರ್ ಕವಿತಾ ಸನಿಲ್ ಭೇಟಿ ನೀಡಿ ಮರ ತೆರವುಗೊಳಿಸುವ ಕಾರ್ಯಾಚರಣೆ ವೀಕ್ಷಿಸಿದರು. ಕಾರ್ಪೊ ರೇಟರ್ ದಯಾನಂದ ಶೆಟ್ಟಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇಶವ ಸನಿಲ್ ಹಾಜರಿದ್ದರು.
Advertisement