Advertisement

ಮಳೆಯಿಂದ ಉರುಳಿದ್ದ ಮರಕ್ಕೆ ಪುನರ್ಜನ್ಮ

05:43 PM Feb 15, 2022 | Team Udayavani |

ಹೈದರಾಬಾದ್‌: ಸಾಮಾನ್ಯವಾಗಿ ಮಳೆ-ಗಾಳಿಯಿಂದ ಧರೆಗುರುಳುವ ಮರಗಳನ್ನು ಕತ್ತರಿಸಿ, ಒಂದೇ ದಿನದಲ್ಲಿ ಅಲ್ಲಿ ಮರವೊಂದಿತ್ತು ಎಂಬ ಗುರುತೂ ಇಲ್ಲದಂತೆ ಮಾಡುತ್ತಾರೆ. ಆದರೆ, ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಮಳೆಯಿಂದ ನೆಲಕ್ಕುರುಳಿದ್ದ 70 ವರ್ಷದ ಹಳೆಯ ಆಲದ ಮರವನ್ನು ಪುನಃ ನೆಡುವ ಮೂಲಕ ಆ ಮರಕ್ಕೆ ಮರು ಜೀವ ಕೊಡಲಾಗಿದೆ.

Advertisement

ರಾಜಣ್ಣ ಸಿರ್ಸಿಲಾದ ಸುದ್ದಲಾ ಗ್ರಾಮದಲ್ಲಿದ್ದ ಸುಮಾರು 70 ವರ್ಷದ ಆಲದ ಮರವು, ನಾಲ್ಕು ತಿಂಗಳ ಹಿಂದೆ ಸುರಿದ ಗಾಳಿ-ಮಳೆಯಿಂದಾಗಿ ನೆಲಕ್ಕುರುಳಿತ್ತು. ಬುರ್ರಾ ಭೂಮೈಯ್ನಾ ಮತ್ತು ಬುರ್ರಾ ರಮೇಶ್‌ ಹೆಸರಿನವರಿಗೆ ಸೇರಿದ್ದ ಜಾಗದಲ್ಲಿದ್ದ ಮರವು ನೆಲಕ್ಕುರುಳಿ ಕೆಲ ದಿನಗಳಲ್ಲೇ ನೀರಿಲ್ಲದ ಹಿನ್ನೆಲೆ ಒಣಗಲಾರಂಭಿಸಿತ್ತು.

ಅದನ್ನು ಕಂಡ ಪರಿಸರ ಪ್ರೇಮಿ ಡಾ.ದೊಬ್ಟಾಲ ಪ್ರಕಾಶ್‌ ಆ ಮರಕ್ಕೆ ಹೇಗಾದರೂ ಮಾಡಿ ಮರುಜೀವ ಕೊಡಬೇಕೆಂದು ನಿರ್ಧರಿಸಿದ್ದಾರೆ. ಪ್ರತಿದಿನ ಅದಕ್ಕೆ ತಾವೇ ನೀರೆರೆದಿದ್ದಾರೆ. ಭೂ ಮಾಲೀಕರ ಅನುಮತಿ ಪಡೆದು, ಆ ಮರವನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲೆಂದು, ಹಲವರಲ್ಲಿ ಸಹಾಯ ಕೇಳಿದ್ದಾರೆ. ರಾಜ್ಯಸಭಾ ಸಂಸದ ಜೆ. ಸಂತೋಷ್‌ ಕುಮಾರ್‌ ಮರವನ್ನು ಸ್ಥಳಾಂತರಿಸಲು ಆರ್ಥಿಕ ಬೆಂಬಲ ಕೊಟ್ಟಿದ್ದು, ಇದೀಗ ಮರ ಮತ್ತೆ ತಲೆ ಎತ್ತಿ ನಿಂತಿದೆ.

ಇದನ್ನೂ ಓದಿ:ಯುದ್ಧದಿಂದ ಹಿಂದೆ ಸರಿದ ರಷ್ಯಾ?: ಉಕ್ರೇನ್ ಗಡಿಯಿಂದ ರಷ್ಯಾದ ಕೆಲವು ಸೇನಾ ತುಕಡಿ ವಾಪಸ್

ಮರ ಬಿದ್ದ ಸ್ಥಳದಿಂದ 6 ಕಿ.ಮೀ. ದೂರದಲ್ಲಿ ಅದನ್ನು ಮತ್ತೆ ನೆಡಲಾಗಿದೆ. ಅದನ್ನು ಸ್ಥಳಾಂತರಿಸಲೆಂದು 100 ಟನ್‌ ತೂಕ ಹೊರಬಲ್ಲ ಲಾರಿಯನ್ನು ತರಿಸಿಕೊಳ್ಳಲಾಗಿತ್ತು. 70 ಟನ್‌ ಎತ್ತಬಲ್ಲ ಸಾಮರ್ಥ್ಯವಿರುವ 2 ಕ್ರೇನ್‌ನಿಂದ ಮರವನ್ನು ಎತ್ತಲು ಸಾಧ್ಯವಿಲ್ಲವೆಂದು ಅದೇ ಸಾಮರ್ಥ್ಯದ 2 ಕ್ರೇನ್‌ಗಳನ್ನು ತರಿಸಲಾಗಿತ್ತು. ಪ್ರಕಾಶ್‌, ಸಂತೋಷ್‌ ಕುಮಾರ್‌ ಜೊತೆ ಕೆಲವು ಎನ್‌ಜಿಒಗಳೂ ಈ ಕೆಲಸಕ್ಕೆ ಕೈ ಜೋಡಿಸಿದ್ದು, ಮರವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next