Advertisement

ಬಂಟ್ವಾಳ : ಕಲ್ಲಿನ ಕೋರೆಯ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು

10:11 PM Feb 25, 2022 | Team Udayavani |

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಏಲಬೆಯಲ್ಲಿ ಕಲ್ಲಿನ ಕೋರೆಯ ಹೊಂಡದಲ್ಲಿದ್ದ ನೀರಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ವೇಳೆಗೆ ಬೆಳಕಿಗೆ ಬಂದಿದೆ.

Advertisement

ಸ್ಥಳೀಯ ನಿವಾಸಿ ಜಗದೀಶ್(45) ಹಾಗೂ ಅಲ್ಲಿಪಾದೆ ನಿದೀಶ್(17) ಮೃತಪಟ್ಟವರು.

ಅವರು ಸಂಜೆಯ ವೇಳೆಗೆ ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ಆ ವೇಳೆ ಹೊಂಡ ಇರುವುದು ತಿಳಿಯದೆ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೃತ ನಿದೀಶ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಅಕ್ಕನ ಮನೆಗೆ ತೆರಳಿದ್ದ ಎನ್ನಲಾಗಿದೆ.

ಇದನ್ನೂ ಓದಿ : ಚಿರತೆ ಪ್ರತ್ಯಕ್ಷ : KRS ಬೃಂದಾವನಕ್ಕೆ ತೆರಳುವ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

ನರಿಕೊಂಬು ಗ್ರಾಮದಲ್ಲಿ ಅಕ್ರಮವಾಗಿ ಕಪ್ಪು ಕಲ್ಲಿನ ಕೋರೆ ಕಾರ್ಯಚರಿಸುವುದಲ್ಲದೆ ಸ್ಥಳೀಯ ಮನೆಗೆ ಹಾನಿಯಾಗುತ್ತದೆ ಎಂದು ಪ್ರತಿಭಟನೆಗಳು ಕೂಡ ನಡೆದಿತ್ತು.
ಆದರೆ ಕೋರೆ ಪ್ರತಿಭಟನೆಗೆ ಜಗ್ಗದೆ ಸಲೀಸಾಗಿ ಕಾರ್ಯಚರಿಸುತ್ತಿದ್ದು, ಅದೇ ಕೋರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisement

ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಸ್ಥಳಕ್ಕೆ ಬೇಟಿ ನೀಡದೆ ಶವವನ್ನು ಕದಲಿಸಲು ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡದ ಸಾರ್ವಜನಿಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಅನಧಿಕೃತ ಕೋರೆ ಎಂದು ನಾವು ಪ್ರತಿಭಟನೆ ನಡೆಸಿದರೂ ಇಲಾಖೆ ಮೌನವಾಗಿದ್ದ ಪರಿಣಾಮವಾಗಿ ಇಂತಹ ದುರ್ಘಟನೆ ಗೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರ ಆಕ್ರೋಶ ಭರಿತ ಮಾತು.

ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next