Advertisement
ಬಂಟ್ವಾಳದಲ್ಲಿ 13,500 ಗಿಡಗಳು ಬಂಟ್ವಾಳದಲ್ಲಿ ಪ್ರಮುಖವಾಗಿ ಹರಿಯುವ ನೇತ್ರಾವತಿ ನದಿ ಹಾಗೂ ಪಲ್ಗುಣಿ ನದಿ ಕಿನಾರೆಯಲ್ಲಿ ಮೇಯಲ್ಲೇ ಬಿದಿರಿನ ಗಿಡಗಳ ನಾಟಿ ಕಾರ್ಯ ಪೂರ್ಣಗೊಂಡಿದೆ. ನೇತ್ರಾವತಿಯ ಬಂಟ್ವಾಳ ವ್ಯಾಪ್ತಿಯ ಒಂದು ಬದಿ ಬಿಳಿಯೂರಿನಿಂದ ಬರಿಮಾರು, ಬಾಳ್ತಿಲ, ಶಂಭೂರು, ಸಜೀಪದವರೆಗೆ, ಮತ್ತೂಂದು ಬದಿಯಲ್ಲಿ ಅಜಿಲಮೊಗರಿನಿಂದ ಸರಪಾಡಿ, ನಾವೂರು, ಜಕ್ರಿಬೆಟ್ಟುವರೆಗೂ ಬಿದಿರಿನ ನಾಟಿ ನಡೆದಿದೆ. ಜತೆಗೆ ಪೊಳಲಿ ಭಾಗ ದಲ್ಲಿ ಪಲ್ಗುಣಿ ನದಿ ಕಿನಾರೆಯಲ್ಲೂ ನಾಟಿ ಯಾಗಿದ್ದು, ಉಳಿ ಗ್ರಾಮದ ವ್ಯಾಪ್ತಿಯಲ್ಲಿ ತೋಡಿನ ಬದಿಯಲ್ಲೂ ಬಿದಿರು ನಾಟಿ ಮಾಡಲಾಗಿದೆ. ಹೀಗೆ ಬಂಟ್ವಾಳ ವಲಯ ವ್ಯಾಪ್ತಿಯಲ್ಲಿ ಸುಮಾರು 13ರಿಂದ 13,500 ಬಿದಿರಿನ ಗಿಡಗಳ ನಾಟಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಕೃಷಿಯ ರಕ್ಷಣೆಗೆ ಅರಣ್ಯ ಪ್ರವಾಹ ನುಗ್ಗಿ ಕೃಷಿ ಹಾನಿಯಾಗುವ ಜತೆಗೆ ಮಣ್ಣು ಸವೆತದಿಂದ ಕೃಷಿ ಭೂಮಿಯೇ ನದಿ ಪಾಲಾಗುವುದಕ್ಕೆ ಬಿದಿರಿನ ನಾಶವೇ ಕಾರಣ. ಹೀಗಾಗಿ ಅವುಗಳನ್ನು ತಡೆಯಲು ಈ ಕಾರ್ಯ ಮಾಡಲಾಗುತ್ತಿದೆ. ಬಿದಿರಿನ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಸವಕಳಿಯನ್ನು ತಡೆಯಬಹುದಾಗಿದೆ. ಜತೆಗೆ ನದಿ ಕಿನಾರೆಯಲ್ಲಿ ಬಿದಿರು ಇದ್ದರೆ ನೆರೆ ವೇಗವಾಗಿ ಕೃಷಿ ತೋಟಕ್ಕೆ ನುಗ್ಗುವುದನ್ನು ತಡೆಯುತ್ತದೆ.
ಮೇಯಲ್ಲಿ ಬಿದಿರು ನಾಟಿ ಮಣ್ಣಿನ ಸವಕಳಿ ತಡೆ ಹಾಗೂ ನೆರೆಯಿಂದ ರಕ್ಷಣೆಗಾಗಿ ಇಲಾಖೆಯು ಈ ವರ್ಷ ಬಿದಿರಿನ ನೆಡುತೋಪುಗಳ ರಚನೆಗಾಗಿ ನಾಟಿ ಮಾಡಿದೆ. ಬಂಟ್ವಾಳ ವಲಯದಲ್ಲಿ ನೇತ್ರಾವತಿ, ಪಲ್ಗುಣಿ ನದಿ ಕಿನಾರೆಯ ಜತೆಗೆ ತೋಡಿನ ಬದಿಗಳಲ್ಲೂ ಈಗಾಗಲೇ ಬಿದಿರಿನ ಗಿಡಗಳನ್ನು ನೆಟ್ಟಿದ್ದೇವೆ. –ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ, ಬಂಟ್ವಾಳ
-ಕಿರಣ್ ಸರಪಾಡಿ