Advertisement

ಬಂಟ್ವಾಳ ಮೂಡೂರು- ಪಡೂರು ಕಂಬಳ; ಕಂಬಳ- ಯಕ್ಷಗಾನ ತುಳುನಾಡಿನ ಕಣ್ಣುಗಳು

03:08 PM Mar 06, 2023 | Team Udayavani |

ಬಂಟ್ವಾಳ: ಜಾನಪದ ಸಂಸ್ಕೃತಿ ಎನಿಸಿಕೊಂಡಿರುವ ಕಂಬಳ, ಯಕ್ಷಗಾನ ತುಳುನಾಡಿನ ಎರಡು ಕಣ್ಣುಗಳಾಗಿದ್ದು, ಅದನ್ನು ಉಳಿಸಿ- ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ನಾವೂರಿನ ಕೂಡಿಬೈಲಿನಲ್ಲಿ ಬಂಟ್ವಾಳ ಮೂಡೂರು- ಪಡೂರು ಜೋಡು ಕರೆ ಕಂಬಳ ಸಮಿತಿಯ ವತಿಯಿಂದ ನಡೆದ 12ನೇ ವರ್ಷದ ಮೂಡೂರು- ಪಡೂರು ಬಂಟ್ವಾಳ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಕೃತಜ್ಞತೆ ಅರ್ಪಿಸಿದರು. ಕಂಬಳ ಕೂಟದ ವಿವಿಧ ವಿಭಾಗಗಳಲ್ಲಿ ಸುಮಾರು 190 ಜೋಡಿ ಕೋಣಗಳು ಭಾಗವಹಿಸಿದ್ದವು.

ವಿವಿಧ ಕ್ಷೇತ್ರದ 7 ಮಂದಿ ಸಾಧಕರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ವಸಂತ ಬಂಗೇರ, ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕಾ¾ನ್‌ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಮೋಹನ್‌ ಗೌಡ ಕಲ್ಮಂಜ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌., ಪ್ರಮುಖರಾದ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ರವಿಶಂಕರ್‌ ಶೆಟ್ಟಿ ಬಡಾಜೆಗುತ್ತು, ಹೇಮನಾಥ ಶೆಟ್ಟಿ ಕಾವು, ರೋಹಿತ್‌ ಶೆಟ್ಟಿ ನಗ್ರಿಗುತ್ತು, ಎಂ. ಶಶಿಧರ್‌ ಹೆಗ್ಡೆ, ಭಾಸ್ಕರ ಕೆ., ಪ್ರತಿಭಾ ಕುಳಾಯಿ, ಶೇಖರ್‌ ಕುಕ್ಕೇಡಿ, ಧರಣೇಂದ್ರಕುಮಾರ್‌, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಶ್ಯಾಲೆಟ್‌ ಪಿಂಟೊ, ಪ್ರಶಾಂತ್‌ ಕಾಜವ, ಆರ್‌.ಕೆ. ಪೃಥ್ವಿರಾಜ್‌, ಜಗನ್ನಾಥ ಚೌಟ ಬದಿಗುಡ್ಡೆ, ರೆ|ಫಾ|ವಿಲ್ಫೆ†ಡ್‌ ರಾಡ್ರಿಗಸ್‌, ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್‌ ಎಲ್ ರಾಡ್ರಿಗಸ್‌, ಸಂಚಾಲಕ ಬಿ. ಪದ್ಮಶೇಖರ್‌ ಜೈನ್‌, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್‌, ಸುದರ್ಶನ್‌ ಜೈನ್‌, ಅವಿಲ್‌ ಮೆನೇಜಸ್‌, ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಎಂ.ಎಸ್‌. ಮಹಮ್ಮದ್‌, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡೂ¤ರು, ಕೋಶಾಧಿಕಾರಿ ಫಿಲಿಫ್ಫ್ರ್ಯಾಂಕ್‌ ಮೊದಲಾದವರು ಪಾಲ್ಗೊಂಡಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.

ಅವಕಾಶ ಕಲ್ಪಿಸಿ
ಸರ್ವಧರ್ಮವನ್ನು ಪ್ರೀತಿಸುವ ರಮಾನಾಥ ರೈ ಅವರು ಕಂಬಳ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ವಿಶೇಷವಾಗಿದ್ದು, ಅವರಿಗೆ ಮತ್ತೆ ಅಧಿಕಾರ ನೀಡುವ ಮೂಲಕ ತುಳುನಾಡಿನ ಸಂಸ್ಕೃತಿಗೆ ಇನ್ನಷ್ಟು ಸೇವೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next