Advertisement
ಪಂಜಿಕಲ್ಲಿನ ಸ್ಥಳೀಯ ಕೃಷಿಕರ ಮೂರ್ನಾಲ್ಕು ರಬ್ಬರ್ ತೋಟಗಳ ಟ್ಯಾಪಿಂಗ್ ಮಾಡುವ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಐವರು ಕಾರ್ಮಿಕರು ಮುಕ್ಕುಡ ನಿವಾಸಿ ಹೆನ್ರಿ ಕಾರ್ಲೊ ಅವರ ಶೆಡ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿ ಮಲಗಿಕೊಂಡು ಮಾತುಕತೆಯಲ್ಲಿ ತೊಡಗಿದ್ದಾಗ ಏಕಾಏಕಿ ರಬ್ಬರ್ ಮರಗಳಿದ್ದ ಇಡೀ ಗುಡ್ಡವೇ ಶೆಡ್ ಮೇಲೆ ಬಿದ್ದಿತು. ಗುಡ್ಡ ಕುಸಿಯುವ ಶಬ್ದ ಕೇಳುತ್ತಿದ್ದಂತೆ ಅಖೀಲ್ ಅವರು ಹೊರಗೆ ಓಡಿ ಬಂದು ಅಪಾಯದಿಂದ ಪಾರಾದರು. ಉಳಿದವರು ಮಣ್ಣಿನಲ್ಲಿ ಸಿಲುಕಿಕೊಂಡರು.
Related Articles
Advertisement
ನಿರಂತರವಾಗಿ ಮೂರು ತಾಸಿಗೂ ಅಧಿಕ ಸಮಯ ಜೆಸಿಬಿ ಯಂತ್ರ ಬಳಸಿ ರಕ್ಷಣೆ ಕಾರ್ಯ ನಡೆಯಿತು. ಅಗ್ನಿಶಾಮಕ ಠಾಣೆಯವರು ಕೂಡ ಸಾಥ್ ನೀಡಿದ್ದರು.
ಶಾಸಕರ ಸೂಚನೆ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಘಟನೆಯ ಕುರಿತು ಮಾಹಿತಿ ಪಡೆದು ದ.ಕ. ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾರ್ಮಿಕರ ರಕ್ಷಣೆಗೆ ಸೂಚನೆ ನೀಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಎಸ್‌ಪಿ ಹೃಷಿಕೇಶ್ ಸೋನಾವಣೆ, ಮಂಗಳೂರು ಎಸಿ ಮದನಮೋಹನ್, ತಹಶೀಲ್ದಾರ್ ಡಾ| ಸ್ಮಿತಾ ರಾಮು, ಗ್ರಾಮಾಂತರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್, ಪಿಎಸ್‌ಐ ಹರೀಶ್ ಕೆ.ಎ., ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ, ಪಿಡಿಒ ವಿದ್ಯಾಶ್ರೀ, ಗ್ರಾಮಕರಣಿಕ ಕುಮಾರ್, ಶಾಸಕರ ಆಪ್ತಸಹಾಯಕ ಶಿವಾನಂದ್, ಗ್ರಾ.ಪಂ. ಸದಸ್ಯರು, ಸ್ಥಳೀಯ ಮುಂದಾಳುಗಳು ಭೇಟಿ ನೀಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.