ಬಂಟ್ವಾಳ: ಹಲವು ಅನುಮಾನಗಳಿಗೆ ಕಾರಣವಾಗಿರುವ ಬಿ.ಸಿ.ರೋಡಿನ ಫ್ಲೈ ಓವರ್ ತಳಭಾಗದಲ್ಲಿ ನಿಲ್ಲಿಸಲಾಗಿದ್ದ ಕೇರಳ ನೋಂದಣಿಯ ಇನ್ನೋವಾ ಕ್ರಿಸ್ಟ ಕಾರನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದು ಕಾರಿನ ಮಾಲಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಕಾರು ಅನಾಥವಾಗಿ ನಿಂತು ಸಾಕಷ್ಟು ಅನು ಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಅದರ ಕುರಿತು ತನಿಖೆ ನಡೆದ ಬಳಕವೇ ಕಾರನ್ನು ಅನಾಥವಾಗಿ ನಿಲ್ಲಿಸಿ ಹೋಗಿರುವ ಹಿಂದಿನ ಸತ್ಯತೆ ಬೆಳಕಿಗೆ ಬರಲಿದೆ.
ಕಾರಿನ ನೋಂದಣಿ ಸಂಖ್ಯೆ ಕೆಎಲ್ 14 ವೈ 8999 ಆಧಾರದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ, ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ದಾಖಲೆ ತೋರಿಸಲಾಗಿದ್ದು, ಆದರೆ ಅದು ಖಚಿತ ಗೊಂಡಿಲ್ಲ.