ಬಂಟ್ವಾಳ: ಇಲ್ಲಿನ ಶಂಭೂರು ಎ.ಎಂಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.
ನೇತ್ರಾವತಿ ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದು, ಎ.ಎಂ.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಶವ ಸಂಪೂರ್ಣ ಕೊಳೆತು ಹೋಗಿದ್ದು, ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿಯಿದ್ದು, ಕೈಯಲ್ಲಿ ಫ್ಯಾನ್ಸಿಯ ಬ್ರೈಸ್ ಲೈಟ್ ಒಂದು ಕಂಡು ಬಂದಿದೆ.
ಸದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಕಾಲು ಜಾರಿ ನದಿಗೆ ಬಿದ್ದಿದ್ದಾರಾ ಅಥವಾ ಬೇರೆ ಕಾರಣಗಳಿರಬಹುದಾ? ಎಂಬುದು ಶವದ ಗುರುತು ಪತ್ತೆ ಹಚ್ಚಿದ ಬಳಿಕ ಮಾತ್ರ ತಿಳಿಯಬಹುದು.
ಇದೀಗ ಶವವನ್ನು ಪೊಲೀಸರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶೀಥಲೀಕರಣದಲ್ಲಿಡಲಾಗಿದ್ದು, ಶವದ ಗುರುತು ಪತ್ತೆಹಚ್ಚಲು ಬಂಟ್ವಾಳ ಆಸ್ಪತ್ರೆಗೆ ಹೋಗಬಹುದು ಎಂದು ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಸಿಬ್ಬಂದಿಗಳಾದ ಸುರೇಶ್, ಪುನೀತ್ ಮತ್ತು ಮಹಾದೇವ ಅವರು ನೇತ್ರಾವತಿ ನದಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ.
ಸುಮಾರು 15 ಕ್ಕೂ ಅಧಿಕ ದಿನಗಳಾಗಿರುವ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದು, ಶವವನ್ನು ಸಂಬಂಧಿಕರು ಗುರುತು ಪತ್ತೆ ಮಾಡುವವರೆಗೆ ಸಂರಕ್ಷಿಸುವ ದೃಷ್ಟಿಯಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇಡಲಾಗಿದೆ ಎಂದು ಎಸ್.ಐ.ಹರೀಶ್ ತಿಳಿಸಿದ್ದಾರೆ.