Advertisement
ಮಿತ್ತಮಜಲು ನಿವಾಸಿ ಚಿತ್ರಕಾರ ಸಾಗರ್ ಆಚಾರ್ಯ (26) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಯುವಕ.
Related Articles
Advertisement
ಈತ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೆ, ನೆರೆಹೊರೆಯವರೊಂದಿಗೆ, ಸ್ನೇಹಿತರೊಂದಿಗೆ ಈತನ ನೋವನ್ನು ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.
ಸಾಗರ್ ಒಬ್ಬ ಅತ್ಯದ್ಭುತ ಚಿತ್ರಕಾರ. ಆದರೆ ಆತನ ಕಲೆಗೆ ಜೀವ ತುಂಬಲು ಆ ವಿಧಿ ಬಿಡಲಿಲ್ಲ. ಕಲಾವಿದನಾಗಿದ್ದ ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನ ಸಿ.ಡಿ.ಪಿ.ಒ.ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅದಾಗಲೇ ಈತನಿಗೆ ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹಾಗಾಗಿ ಈತ ಕೆಲಸ ಬಿಟ್ಟು ಮನೆಯಲ್ಲೇ ಇದ್ದ.
ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲೇಬೇಕು ಎಂಬ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಎರಡು ಕಿಡ್ನಿ ವೈಫಲ್ಯ ಕಂಡ ಹಿನ್ನೆಲೆ ಈತನ ತಂದೆಯ ಒಂದು ಕಿಡ್ನಿಯನ್ನು ಈತನಿಗೆ ನೀಡಲಾಗಿತ್ತು.
ಮರದ ಕೆಲಸ ಮಾಡುತ್ತಿದ್ದ ತಂದೆಯ ಕಿಡ್ನಿ ಮಗನಿಗೆ ನೀಡಿದ ಬಳಿಕ ತಂದೆಗೆ ಕೆಲಸ ಮಾಡಲು ಸ್ವಲ್ಪ ಕಷ್ಟದ ಸ್ಥಿತಿ ಉಂಟಾಗಿತ್ತು. ಈ ನಡುವೆ ಮನೆಯಲ್ಲಿ ತಾಯಿಗೂ ಸ್ವಲ್ಪ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು. ಮನೆಯಲ್ಲಿರುವ ಎಲ್ಲಾರು ಅನಾರೋಗ್ಯ ಪೀಡಿತರಾಗಿ ದುಡಿಯುವ ಕೈಗಳಿಗೆ ಶಕ್ತಿಯಿಲ್ಲ, ಔಷಧಿಗೆ ಕಾಸಿಲ್ಲ, ಸರಿಯಾದ ಉದ್ಯೋಗವು ಇಲ್ಲ. ಹೀಗೆ ಅನೇಕ ಕಾರಣಗಳಿಗೆ ಮನನೊಂದು ಅನೇಕ ಬಾರಿ ಈ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.
ಈತನಿಗೆ ಕಿಡ್ನಿ ವೈಫಲ್ಯದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಮಾಧ್ಯಮಗಳು ನೆರವಿಗಾಗಿ ವರದಿಗಳನ್ನು ಮಾಡಿತ್ತು. ಆದರೆ ಅತ್ಯಂತ ಕಷ್ಟಕರ ಜೀವನವನ್ನು ಸಹಿಸಲಾರದೆ ಸಾಗರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಸ್ಥಳೀಯರ ಮಾತಾಗಿದೆ.
ಸುಮಾರು 30 ಅಡಿ ಆಳದಲ್ಲಿರುವ ಬಾವಿಯಿಂದ ಸಾಗರ್ ಅವರ ಮೃತದೇಹವನ್ನು ಬಂಟ್ವಾಳ ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ರೋಹಿತ್, ಕಿರಣ್ ಕುಮಾರ್, ರಾಜೇಶ್, ಸುರೇಂದ್ರ ಹಾಗೂ ನಾಗರಾಜ್ ಅವರ ನೆರವಿನಿಂದ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.