ವಿಟ್ಲ: ಮಾಣಿ ಜಂಕ್ಷನ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಹಲ್ಲೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಬುಧವಾರ ದೂರು-ಪ್ರತಿದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಮಾಣಿ ಕೊಡಾಜೆ ನಿವಾಸಿ ಮಹೇಂದ್ರ (26) ಗಾಯಗೊಂಡವರು. ಈ ಪ್ರಕರಣದಲ್ಲಿ ಒಟ್ಟು 9 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ. ಆಕ್ಟಿವಾ ಹೋಂಡಾದಲ್ಲಿ ಬ್ಯಾಂಕಿನಲ್ಲಿ ಅಡವಿಟ್ಟ ಚಿನ್ನದ ಸರ ಬಿಡಿಸಿ ತೆರಳುತ್ತಿರುವ ವೇಳೆ ಮಾಣಿ ಜಂಕ್ಷನ್‌ನಲ್ಲಿ ಆಕ್ಟಿವಾ ಸ್ಕೂಟರ್‌ಗೆ ಹಿಂದಿನಿಂದ ಆಮ್ನಿ ಢಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ರಾಕೇಶ್, ಮಂಜುನಾಥ್ ವಿಕೆಟ್‌ನಲ್ಲಿ ಮುಖಕ್ಕೆ, ತಲೆಗೆ, ಕಾಲಿಗೆ ಹೊಡೆದಿದ್ದು, ಅವರೊಂದಿಗೆ ಇದ್ದ ಅನಂತಾಡಿ ಪ್ರವೀಣ್ ಕಬ್ಬಿಣದ ರಾಡ್‌ನಿಂದ ಹಣೆಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಸಿದು ಬೆದರಿಕೆ ಹಾಕಿ ಹೋಗಿದ್ದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಪ್ರತಿದೂರು
ಮಾಣಿ ಗ್ರಾಮದ ಪಟ್ಲಕೋಡಿಯಲ್ಲಿ ಅನಂತಾಡಿ ಕರಿಂಕ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ(28) ಅವರಿಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಲಾಗಿದೆ. ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್, ಹರೀಶ್ ಮೇಲೆ ದೂರು ನೀಡಲಾಗಿದೆ.
ಬ್ಯಾಂಕಿನಿಂದ ಹಣದೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಮಾಣಿ ಕಡೆಗೆ ಹೊರಟಿದ್ದು, ಪಟ್ಲಕೋಡಿ ಎಂಬಲ್ಲಿ ಸ್ವಿಫ್ಟ್ ಕಾರು, ಪಿಕ್‌ಆಪ್ ಹಾಗೂ ಬ್ರಿಜಾ ಕಾರು ಅಡ್ಡವಿಟ್ಟು ಬೈಕ್ ಕೀಯನ್ನು ಕಸಿದುಕೊಂಡು ನಿಂದಿಸಿ, ಬೈಕ್‌ನಲ್ಲಿದ್ದ 13,000 ರೂ. ಇದ್ದ ಹಣದ ಚೀಲವನ್ನು ತೆಗೆದು, ಕೈ ಹಾಗೂ ರಾಡ್‌ನಿಂದ ಹೊಡೆದು ಬೆದರಿಕೆ ಹಾಕಿದ ಬಗ್ಗೆ ಪ್ರತಿದೂರು ನೀಡಲಾಗಿದೆ. ದಲಿತ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.