Advertisement

Bantwal: ಯುವಕನಿಗೆ ಥಳಿಸುವ ವೀಡಿಯೋ ವೈರಲ್‌; ಪ್ರಕರಣ ದಾಖಲಾಗಿಲ್ಲ

12:13 AM Aug 23, 2024 | Team Udayavani |

ಬಂಟ್ವಾಳ: ಯುವಕರ ಗುಂಪೊಂದು ಯುವಕನೋರ್ವನಿಗೆ ರಕ್ತ ಬರುವ ರೀತಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಲಿದ್ದು, ಅದು ಸಾಲೆತ್ತೂರು, ವಿಟ್ಲ, ಪುತ್ತೂರು ಕಡೆಯ ವಿಡಿಯೋ ಎನ್ನಲಾಗುತ್ತಿದೆ.

Advertisement

ಹೀಗಾಗಿ ಎಲ್ಲಿಯ ವೀಡಿಯೋ ಎಂಬುದು ಅಸ್ಪಷ್ಟವಾಗಿದ್ದು, ಈ ಕುರಿತು ಯಾವುದೇ ಪೊಲೀಸ್‌ ಠಾಣೆಗಳಲ್ಲೂ ಪ್ರಕರಣ ದಾಖಲಾಗಿಲ್ಲ.

ಯುವಕರ ಗುಂಪು ಮುಸ್ಲಿಂ ಭಾಷೆಯಲ್ಲಿ ಮಾತನಾಡುತ್ತಿದ್ದು, ಹೀಗಾಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿರುವ ಸಾಧ್ಯತೆ ಇದೆ. ಅವರು ಹುಡುಗಿಯ ವಿಚಾರಕ್ಕೆ ಸಂಬಂಧಿಸಿ ಹೊಡೆಯುತ್ತಿದ್ದು, ಮೊಬೈಲ್‌ನ ಲಾಕ್‌ ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ. ಯುವಕನ ತುಟಿಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿರುವುದು ದೃಶ್ಯದಲ್ಲಿ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next