Advertisement

ಸದಸ್ಯರ ಬೆರಳಚ್ಚು ಸಂಗ್ರಹ ಪೂರ್ಣ

08:23 PM Jan 08, 2020 | mahesh |

ಬಂಟ್ವಾಳ: ಸರಕಾರವು ಪಡಿತರ ಚೀಟಿ ಹೊಂದಿರುವ ಸದಸ್ಯರ ಇ-ಕೆವೈಸಿ (ಬೆರಳಚ್ಚು)ಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸುವ ಕಾರ್ಯ ಪ್ರಾರಂಭಿಸಿದ್ದು, ಬಂಟ್ವಾಳದಲ್ಲಿ ಮೂರು ವಿಧಗಳ ಒಟ್ಟು 83,869 ಪಡಿತರ ಚೀಟಿಗಳಲ್ಲಿ ಈತನಕ ಒಟ್ಟು 1,28,063 ಸದಸ್ಯರು ಬೆರಳಚ್ಚು ನೀಡಿದ್ದಾರೆ.

Advertisement

ತಾಲೂಕಿನಲ್ಲಿ ಒಟ್ಟು 100 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರಸ್ತುತ ಮೂರು ದಿನಗಳಿಂದ ಸರ್ವರ್‌ ಸಮಸ್ಯೆಯಿಂದ ಬೆರಳಚ್ಚು ಸಂಗ್ರಹ ಪ್ರಕ್ರಿಯೆ ನಡೆದಿಲ್ಲ. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಈ ಪ್ರಕ್ರಿಯೆ ಆರಂಭಗೊಳಿಸಲಾಗಿದ್ದು, ಆದರೆ ಸರ್ವರ್‌ ಸಮಸ್ಯೆ ಕಾಡುತ್ತಿರುವುದರಿಂದ ಬೆರಳಚ್ಚು ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆದಿಲ್ಲ. ಜತೆಗೆ ಜನರೂ ಸೂಕ್ತ ರೀತಿಯ ಸ್ಪಂದನೆ ನೀಡಿಲ್ಲ.

ಎಪಿಎಲ್‌ (ಆದ್ಯತೇತರ), ಬಿಪಿಎಲ್‌(ಆದ್ಯತಾ) ಹಾಗೂ ಅಂತ್ಯೋದಯ ಪಡಿತರ ಚೀಟಿಯ ಕುಟುಂಬದ ಸದಸ್ಯರು ಇಕೆವೈಸಿ ನೀಡಬೇಕಿದ್ದು, ಈಗಾಗಲೇ ಅದರ ಅಂತಿಮ ದಿನಾಂಕವನ್ನು ಮಾ. 31ರ ವರೆಗೆ ವಿಸ್ತರಿಸಲಾಗಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲ ಸದಸ್ಯರು ಅದನ್ನು ಕಡ್ಡಾಯವಾಗಿ ಮಾಡಬೇಕಿದ್ದು, ಆದರೆ ಎಲ್ಲರೂ ಜತೆಯಾಗಿ ತೆರಳಬೇಕಿಲ್ಲ ಎಂಬ ಮಾಹಿತಿಯನ್ನೂ ನೀಡಿದೆ.
ಸರಕಾರವು ಈ ಹಿಂದೆ ಬೆರಳಚ್ಚು ಸಂಗ್ರಹ ಪ್ರಕ್ರಿಯೆಗೆ ಜ. 31ರ ಗಡುವು ನೀಡಿದ್ದು, ಅದರ ದಿನಾಂಕ ಹತ್ತಿರ ಬರುತ್ತಿದ್ದಂತೆ ಒತ್ತಡ ಅಧಿಕಗೊಂಡು ಸರ್ವರ್‌ ಸಮಸ್ಯೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸು ತ್ತಿದ್ದು, ಹೀಗಾಗಿ ದಿನಾಂಕವನ್ನು ಮಾ. 31ರ ವರೆಗೆ ವಿಸ್ತರಿಸುವ ಜತೆಗೆ ಸರ್ವರ್‌ ಬದಲಾವಣೆಗೂ ಮುಂದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ವೇಗವಾಗಿ ಸಾಗಬಹುದು ಎಂದು ಆಹಾರ ಶಾಖೆಯ ಸಿಬಂದಿ ನಿರೀಕ್ಷಿಸುತ್ತಿದ್ದಾರೆ.

ಬಹುತೇಕ ನ್ಯಾಯಬೆಲೆ ಅಂಗಡಿಗಳು ಗ್ರಾಮೀಣ ಭಾಗ ದಲ್ಲೇ ಇರುವುದರಿಂದ ಕೆಲವೊಂದೆಡೆ ನೆಟ್‌ವರ್ಕ್‌ ಸಮಸ್ಯೆಗಳೂ ಕಾಡುತ್ತಿವೆ. ಈ ಕುರಿತು ಹಿಂದಿನಿಂದಲೂ ಆರೋಪಗಳು ಕೇಳಿಬರುತ್ತಿದ್ದು, ಹೀಗಾಗಿ ನೆಟ್‌ವರ್ಕ್‌ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಕಾರ್ಯ ನಡೆಯಬೇಕಿದೆ.

ಬಂಟ್ವಾಳ ತಾಲೂಕಿನಲ್ಲಿ 5,977 ಅಂತ್ಯೋದಯ ಪಡಿತರ ಚೀಟಿಗಳಿದ್ದು, 31,009 ಸದಸ್ಯರಿದ್ದಾರೆ. ಅದರಲ್ಲಿ 1,365 ಪಡಿತರ ಚೀಟಿಯ 6,218 ಮಂದಿ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. 55,851 ಬಿಪಿಎಲ್‌(ಆದ್ಯತಾ) ಪಡಿತರ ಚೀಟಿಯಲ್ಲಿ 2,30,909 ಸದಸ್ಯರಿದ್ದು, ಅದರಲ್ಲಿ 24,693 ಚೀಟಿಗಳ 99,644 ಮಂದಿ ಇ-ಕೆವೈಸಿ ಪೂರ್ಣಗೊಳಿಸಿ ದ್ದಾರೆ. 22,041 ಎಪಿಎಲ್‌ (ಆದ್ಯತೇತರ) ಪಡಿತರ ಚೀಟಿ ಗಳಲ್ಲಿ 1,00,115 ಸದಸ್ಯರಿದ್ದು, ಅದರಲ್ಲಿ 5,406 ಚೀಟಿಗಳ 22201 ಮಂದಿ ಇಕೆವೈಸಿ ಪೂರ್ಣಗೊಳಿಸಿದ್ದಾರೆ ಎಂದು ತಾ| ಕಚೇರಿಯ ಮೂಲಗಳು ತಿಳಿಸಿವೆ.

Advertisement

ಸರ್ವರ್‌ ಸಮಸ್ಯೆಗೆ ಪರಿಹಾರ
ಅಕ್ಟೋಬರ್‌ನಲ್ಲಿ ಇ-ಕೆವೈಸಿ ಪ್ರಾರಂಭಗೊಂಡಿದ್ದು, ಸರ್ವರ್‌ ಸಮಸ್ಯೆಯಿಂದ ಕಳೆದ 3 ದಿನಗಳಲ್ಲಿ ಬೆರಳಚ್ಚು ಸಂಗ್ರಹ ಕಾರ್ಯ ನಡೆದಿಲ್ಲ. ಪ್ರಸ್ತುತ ಸರಕಾರದ ಸುತ್ತೋಲೆ ಬಂದಿದ್ದು, ಸರ್ವರ್‌ ಸಮಸ್ಯೆಗೆ ಪರಿಹಾರ ನೀಡಲು ತಂತ್ರಜ್ಞಾನ ಬದಲಾವಣೆ ಮಾಡಿ ಜ. 10ರ ಬಳಿಕ ಬೆರಳಚ್ಚು ಪ್ರಕ್ರಿಯೆ ವೇಗ ವಾಗಿ ಸಾಗುವ ಸಾಧ್ಯತೆ ಇದೆ.
 - ಶ್ರೀನಿವಾಸ್‌, ಆಹಾರ ಶಿರಸ್ತೇದಾರರು, ತಾಲೂಕು ಕಚೇರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next