Advertisement

Bantwal ನಂದಾವರ: ಗಾಂಜಾ ಸೇವನೆ; ಇಬ್ಬರ ಬಂಧನ

05:35 PM Aug 14, 2023 | Team Udayavani |

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ನಂದಾವರ ಶಾಲಾ ಬಳಿ ಗಾಂಜಾ ಸೇವಿಸಿ ನಶೆಯಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ನಂದಾವರ ಕೋಟೆ ನಿವಾಸಿ ಮಹಮ್ಮದ್‌ ಶಾಕಿಬ್‌(20) ಹಾಗೂ ಬಿ.ಸಿ.ರೋಡಿನ ಶಾಂತಿಅಂಗಡಿ ನಿವಾಸಿ ಮಹಮ್ಮದ್‌ ಆರೀಫ್‌(20) ಬಂಧಿತ ಆರೋಪಿಗಳು. ಇವರು ನಶೆಯಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next