Advertisement
ಶನಿವಾರವೂ ಇದೇ ರೀತಿ ವಾಹನ ಓಡಾಡಿದ್ದು, ಬಂಟ್ವಾಳ ಪೇಟೆಯಲ್ಲಿ ಬೆಳಗ್ಗೆ ಸಂಚಾರದೊತ್ತಡ ಕಂಡುಬಂತು. ತಾಲೂಕಿನ ಬಿ.ಸಿ.ರೋಡ್, ಬಂಟ್ವಾಳ ಪೇಟೆ, ಕಲ್ಲಡ್ಕ, ಮೆಲ್ಕಾರ್, ವಿಟ್ಲ, ಮಾಣಿ, ಕೈಕಂಬ, ಫರಂಗಿಪೇಟೆ, ವಾಮದಪದವು, ಸಿದ್ದಕಟ್ಟೆ, ಪುಂಜಾಲಕಟ್ಟೆ ಮೊದಲಾದ ಭಾಗಗಳಲ್ಲಿ ಬೆಳಗ್ಗೆ ಹೆಚ್ಚಿನ ವಾಹನಗಳು ಓಡಾಟ ನಡೆಸಿದ್ದು, 10 ಗಂಟೆಯ ಬಳಿಕ ಎಲ್ಲಡೆ ಬಂದ್‌ನ ವಾತಾವರಣ ಕಂಡು ಬಂತು. ಬೆಳಗ್ಗಿನ ಹೊತ್ತು ಬಂಟ್ವಾಳ ಪೇಟೆಗೆ ಹೆಚ್ಚಿನ ವಾಹನಗಳು ಏಕಾಏಕಿ ಆಗಮಿಸಿದ ಪರಿಣಾಮ ಕೊಂಚ ಮಟ್ಟಿನ ಬ್ಲಾಕ್ ಉಂಟಾಗಿತ್ತು. ಬಳಿಕ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಕಲೈಮಾರ್ ಅವರು ಸ್ಥಳಕ್ಕೆ ತೆರಳಿ ವಾಹನಗಳಿಗೆ ಎಚ್ಚರಿಕೆ ನೀಡಿದರು. ಬಂಟ್ವಾಳ ಸಂಚಾರ ಠಾಣೆಯ ಎಎಸ್‌ಐ ಬಾಲಕೃಷ್ಣ ಗೌಡ ಕೂಡ ಪೇಟೆಗೆ ತೆರಳಿ ವಾಹನ ಚಾಲಕರು/ ಸವಾರರಿಗೆ ಎಚ್ಚರಿಕೆ ನೀಡಿದರು.
ಬೆಳಗ್ಗೆ ತುರ್ತು ಕೆಲಸಗಳಿಗೆ ತೆರಳುವವರ ಪ್ರಯಾಣಕ್ಕಾಗಿ ಬೆಳಗ್ಗೆ ಒಂದೆರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದ್ದು, ಜತೆಗೆ ಬೆಳಗ್ಗೆ ಆಟೋ ಸಂಚಾರವೂ ಇತ್ತು.