ಬಂಟ್ವಾಳ: ಮನೆಯ ಮುಂಬಾಗಿಲು ಮುರಿದು ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಎಂಬಲ್ಲಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಅವರ ಮನೆಯಿಂದ ಸುಮಾರು 2.50. ಲಕ್ಷ ಮೌಲ್ಯದ 9 ಪವನ್ ಚಿನ್ನವನ್ನು ಕಳವು ಮಾಡಲಾಗಿದೆ.
ಕರಿಯ ಮೂಲ್ಯ ಅವರ ಮಗಳು ಶ್ವೇತಾ ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾರಣ ಕಿವಿಯೊಲೆ, ಕುತ್ತಿಗೆ ಚೈನ್, ಸೇರಿದಂತೆ ಇನ್ನೂ ಕೆಲವು ಚಿನ್ನಾಭರಣಗಳನ್ನು ಮನೆಯ ಕಪಾಟಿನಲ್ಲಿ ಇರಿಸಿದ್ದರು. ಮೇ.22 ರಂದು ಬೆಳಿಗ್ಗೆ 9 ಗಂಟೆ ವೇಳೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಸೋಮವಾರ ಸಂಜೆ ಮನೆಗೆ ಬಂದು ನೋಡುವಾಗ ಮುಂಬಾಗಿಲು ಮರಿದ ಸ್ಥಿತಿಯಲ್ಲಿತ್ತು. ಮನೆಯೊಳಗೆ ಹೋಗಿ ನೋಡಿದಾಗ ಕಪಾಟಿನ ಬೀಗ ಮುರಿದು ಚಿನ್ನ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಗಾಯಕಿಯ ಶವ ಸಮಾಧಿ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಆರೋಪ
Related Articles
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.