Advertisement
ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಸಂಬಂಧಿ ಮಹಿಳೆಯರೇ ಆತನ ಟಾರ್ಗೆಟ್ ಆಗಿದ್ದು, ಬಂಟ್ವಾಳದ ಮಹಿಳೆಯೋರ್ವರ ಅಶ್ಲೀಲ ಫೋಟೋಗಳನ್ನು ವಾಟ್ಸ್ ಆ್ಯಪ್ ಗ್ರೂಪ್‌ಗ್ಳಲ್ಲಿ ಶೇರ್ ಮಾಡಿರುವ ಕುರಿತು ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು.
ಈತನ ವಿಕೃತ ಕೃತ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಕುರಿತು ತನಿಖೆ ನಡೆಸಿದಾಗ ಆತ ಇತರರಿಗೂ ಅದೇ ರೀತಿ ಬ್ಲ್ಯಾಕ್‌ವೆುàಲ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯು ಫೋಟೋಗಳನ್ನು ಬಳಸಿಕೊಂಡು ಸುಮಾರು 4.48 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಮದುವೆಯಾದವರೇ ಟಾರ್ಗೆಟ್
ಮದುವೆಯಾದ ಮಹಿಳೆಯರನ್ನೇ ಗುರಿಯಾಗಿಸಿ ಮಾಡಿದ ಆತನ ಕೃತ್ಯಗಳನ್ನು ಗಮನಿಸಿದಾಗ ಸೈನೆಡ್ ಮೋಹನನ ಕೃತ್ಯಗಳು ನೆನಪಿಗೆ ಬಂದಿದ್ದು, ವಿಶೇಷ ವೆಂದರೆ ಸೈನೈಡ್ ಮೋಹನನ ಪ್ರಕರಣವನ್ನು ಬೇಧಿಸುವ ತಂಡದಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸಿದ್ದ ವಿವೇಕಾನಂದ ಅವರು ಪ್ರಸ್ತುತ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದು, ರಾಧಾಕೃಷ್ಣನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
Related Articles
Advertisement
ವಿಜಯಪುರದಲ್ಲಿ ವೈನ್ ಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ರಾಧಾಕೃಷ್ಣನನ್ನು ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್ ಮತ್ತು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಪತ್ತೆಗಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಎಡಿಶನಲ್ ಎಸ್‌ಪಿ ಕುಮಾರ್‌ಚಂದ್ರ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಸಿಂಗ್ ಥೋರಟ್ ಮಾರ್ಗದರ್ಶನದಲ್ಲಿ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.