Advertisement

ಬಂಟ್ವಾಳ: ಲಾರಿ ಢಿಕ್ಕಿ; ಬೈಕ್ ಸವಾರನಿಗೆ ಗಾಯ

11:46 AM Feb 20, 2022 | Team Udayavani |

ಬಂಟ್ವಾಳ: ಭಾನುವಾರ ನಸುಕಿನ ವೇಳೆಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.

Advertisement

ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಬೈಕ್ ನಜ್ಜುಗುಜ್ಜಾಗಿದೆ. ಕಲ್ಲಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಅಲ್ಲಲ್ಲಿ ರಸ್ತೆಯಂಚಿನಲ್ಲಿ ಅಪಾಯ ಎದುರಿಸುವಂತಾಗಿದೆ.

ಇದನ್ನೂ ಓದಿ:ನಿಯಮ ಮೀರಿ ಪರಿಸರ ಹಾಳು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಸೂರ್ಯ ಮೂಡುವ ಮೊದಲು ಪ್ರಖರ ಲೈಟ್ ನೊಂದಿಗೆ ವಾಹನಗಳು ಸಾಗುವ ವೇಳೆ ದ್ವಿಚಕ್ರ ವಾಹನ ಸವಾರರೂ ಗಲಿಬಿಲಿಗೊಳ್ಳುವಂತಾಗಿದ್ದು, ಈ ಭಾಗದಲ್ಲಿ ಜಾಗರೂಕತೆಯಿಂದ ವಾಹನ ಸಂಚರಿಸಬೇಕಾಗುತ್ತದೆ. ಆದಾಗ್ಯೂ ಅಪಘಾತಗಳು ಆಗಾಗ್ಗೆ ಸಂಭವಿಸುವ ಪೂರ್ಲಿಪ್ಪಾಡಿಯಲ್ಲಿ ಮತ್ತೊಂದು ಅಪಘಾತ ನಡೆದಿದೆ. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next