Advertisement

Bantawala: ಹೊಡೆದಾಡಿಕೊಂಡ ಯುವಕರ ಗುಂಪು; ಆಸ್ಪತ್ರೆಗೆ ದಾಖಲು

12:24 AM Aug 05, 2024 | Team Udayavani |

ಬಂಟ್ವಾಳ: ಯುವಕರ ಎರಡು ತಂಡಗಳು ಹೊಡೆದಾಡಿಕೊಂಡು ಒಂದಷ್ಟು ಯುವಕರು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ಬಂಟ್ವಾಳ ಬೈಪಾಸ್‌ನಲ್ಲಿ ನಡೆದಿದೆ.

Advertisement

ಬಂಟ್ವಾಳ ಹಾಗೂ ಬಿ.ಸಿ. ರೋಡಿನ ಯುವಕರು ಹೊಡೆದಾಡಿಕೊಂಡಿದ್ದು, ಮೂರರಿಂದ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೆಲವರು ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿದ್ದು, ಒಂದಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಾಳುಗಳ ಸ್ಪಷ್ಟ ವಿವರ ತಿಳಿದುಬಂದಿಲ್ಲ.

ಹೊಡೆದಾಡಿಕೊಂಡ ಯುವ ಕರು ಒಂದೇ ಕೋಮಿಗೆ ಸೇರಿದವರಾಗಿದ್ದು, ಆದರೆ ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಹೊಡೆದಾಡಿಕೊಂಡ ಯುವಕರ ಗುಂಪು ಚದುರಿದೆ. ಹೆತ್ತವರಿಗೆ ಬೈದ ವಿಚಾರಕ್ಕೆ ಸಂಬಂಧಿಸಿ ಮಾತುಕತೆಯ ವೇಳೆ ಸಂಘರ್ಷ ಉಂಟಾಗಿದೆ ಎಂದು ಹೇಳಲಾಗಿದ್ದು, ಘಟನೆಯ ಸ್ಪಷ್ಟ ಮಾಹಿತಿ ಪೊಲೀಸರ ತನಿಖೆಯ ಬಳಿಕ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next