ನಾಸಿಕ್, ಸೆ. 20: ಬಂಟರ ಸಂಘ ನಾಸಿಕ್ ಇದರ 14ನೇ ವಾರ್ಷಿಕ ಸಾಂಸ್ಕೃತಿಕ ಉತ್ಸವವು ಸೆ. 1ರಂದು ಸಾತ್ಪುರ ಹೊಟೇಲ್ ಮಸಾಲಾ ಝೊನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಲಿಂಗಪ್ಪ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ಜೆ. ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ರಂಗನಾಥ ರೈ, ಕಟ್ಟಡ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿ ಇವರುಗಳು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರು ಭಜನ ಕಾರ್ಯಕ್ರಮ ಹಾಗೂ ಅರಸಿನ ಕುಂಕುಮ ಕಾರ್ಯ ಕ್ರಮವನ್ನು
ನಡೆಸಿದರು.
ಈ ಸಂದರ್ಭ ಚಿತ್ರಕಲೆ, ಛದ್ಮವೇಷ, ರಂಗೋಲಿ, ಸಂಗೀತ, ನೃತ್ಯ, ಭಾಷಣ ಸ್ಪರ್ಧೆಗಳನ್ನು ಸದಸ್ಯರಿಗಾಗಿ ಆಯೋಜಿಸಲಾಯಿತು. ಸಂಘದ ಯುವ ವಿಭಾಗದ ಸದಸ್ಯರಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.ನಾಟಕದ ನಿರ್ದೇಶನ
ಮತ್ತು ಸಂಭಾಷಣೆಯನ್ನು ಅಮಿತ್ ಎಲ್. ಶೆಟ್ಟಿ ಮಾಡಿದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ರಾಜ್ ಶೇಖರ್ ಉಚ್ಚಿಲ್, ಪ್ರೇಮಾ ಟಿ. ರೈ, ಪುಷ್ಪಾ ಭಂಡಾರಿ, ಕುಸುಮಾ ಶೆಟ್ಟಿ, ಶಶಿಕಾಂತ್ ಶೆಟ್ಟಿ, ನಿತ್ಯಾನಂದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರವೀಂದ್ರ ಕೆ. ಶೆಟ್ಟಿ, ಶಾಲ್ಮಲಿ ಎ. ಶೆಟ್ಟಿ,. ಶೆಟ್ಟಿ, ಪ್ರಸನ್ನ ಶೆಟ್ಟಿ ಮತ್ತು ರೂಪೇಶ್‌ಶೆಟ್ಟಿ ಇವರುಗಳು ಸಹಕರಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.
ರತ್ನಾಕರ ಶೆಟ್ಟಿ, ವಿಲಾಸಿನಿ ಪಿ. ಶೆಟ್ಟಿ, ಶರಣ್ಯಾ ಎಂ. ಶೆಟ್ಟಿ, ಪ್ರಭಾವತಿ ಆರ್. ಶೆಟ್ಟಿ ಸಹಕಾರ ನೀಡಿದರು. ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಹರೀಶ್ ಆಳ್ವ, ದಿನೇಶ್ ಶೆಟ್ಟಿ, ಉದಯ್ ಶೆಟ್ಟಿ, ರಂಗನಾಥ ರೈ, ಶಶಿಕಾಂತ್ ಶೆಟ್ಟಿ, ರವೀಂದ್ರ ಕೆ. ಶೆಟ್ಟಿ, ಪ್ರಕಾಶ್ ಎಸ್. ಶೆಟ್ಟಿ, ಅಮಿತ್ ಶೆಟ್ಟಿ, ಅರುಣ್ ಶೆಟ್ಟಿ, ರಂಗನಾಥ ಪಕ್ಕಳ, ಮಮತಾ ಬಿ. ಶೆಟ್ಟಿ, ಲಲಿತಾ ಕೆ. ಶೆಟ್ಟಿ, ವಿಶಾಲ ಎಲ್. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರವೀಂದ್ರ ಕೆ. ಶೆಟ್ಟಿ, ಪ್ರದೀಪ್ ಎಸ್. ರೈ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದರು. ದಿನೇಶ್ ಶೆಟ್ಟಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಸಮಾಜ ಬಾಂಧವರು ಹೆಚ್ಚಿನಸಂಖ್ಯೆಯಲ್ಲಿ ಉಪಸ್ಥಿತರಿದ್ದರು.