Advertisement

ತಾಯಿಯ ಕೊನೆಯಾಸೆ ನೆರವೇರಿಸಿದ ಸುಷ್ಮಾ ಸ್ವರಾಜ್ ಮಗಳು

09:36 AM Sep 29, 2019 | keerthan |

ಹೊಸದಿಲ್ಲಿ: ಇತ್ತೀಚೆಗೆ ನಿಧನ ಹೊಂದಿದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯೊಂದು ಈಗ ಪೂರೈಸಿದೆ. ಅದು ಅವರ ಮಗಳ ಮೂಲಕ. ಹೌದು ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಅಮ್ಮನ ಕೊನೆಯಾಸೆ ಈಡೇರಿಸಿದ್ದಾರೆ.

Advertisement

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾಗಿ ವಾದ ಮಂಡಿಸಿದ್ದ ಹರಿಶ್ ಸಾಳ್ವೆ ಅವರು ವಾದ ಶುಲ್ಕವಾಗಿ ಒಂದು ರೂಪಾಯಿ ಪಡೆಯಲು ನಿರ್ಧರಿಸಿದ್ದರು. ಈ ಶುಲ್ಕವನ್ನು ಈಗ ಹರಿಶ್ ಸಾಳ್ವೆ ಅವರಿಗೆ ಸುಷ್ಮಾ ಮಗಳು ಬಾನ್ಸುರಿ ನೀಡಿದ್ದಾರೆ.

ಕಳೆದ ಆಗಸ್ಟ್ 6ರಂದು ಸುಷ್ಮಾ ಸ್ವರಾಜ್ ಅವರು ಹರಿಶ್ ಸಾಳ್ವೆಯವರಿಗೆ ಕರೆ ಮಾಡಿ ನೀವು ನನ್ನನ್ನು ಭೇಟಿಯಾಗಬೇಕು.  ನಿಮ್ಮ ಶುಲ್ಕವನ್ನು ಪಡೆಯಬೇಕು ಎಂದಿದ್ದರು. ಆದರೆ ಅದಾದ ಕೇವಲ ಒಂದು ಗಂಟೆಯಲ್ಲಿ ಸುಷ್ಮಾ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

ಇತ್ತೀಚೆಗೆ ಹರೀಶ್ ಸಾಳ್ವೆ ಅವರನ್ನು ಭೇಟಿಯಾಗಿದ್ದ ಬಾನ್ಸರಿ ತಾಯಿಯ ಕೊನೆಯಾಸೆ ಪೂರೈಸಿದ್ದಾರೆ. ಈ ವಿಷಯವನ್ನು ಸುಷ್ಮಾ ಪತಿ ಸ್ವರಾಜ್ ಕೌಶಲ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next