Advertisement

24 ವರ್ಷದ ನಂತರ ತುಂಬಿದ ಬನ್ನಿ ಮಂಗಲ ಕೆರೆ

03:11 PM Sep 11, 2022 | Team Udayavani |

ದೇವನಹಳ್ಳಿ: ತಾಲೂಕಿನ ಬನ್ನಿಮಂಗಲಕೆರೆ ತುಂಬಿ 24ವರ್ಷದ ನಂತರ ತುಂಬಿ ಕೋಡಿ ಹರಿದ ಕೆರೆಗೆ ಬನ್ನಿಮಂಗಲ ಮತ್ತು ಸುಣ್ಣಘಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿವಿಧ ಪೂಜಾ ಕೈಂಕರ್ಯ ನಡೆಸಿ ತೆಪ್ಪೋತ್ಸವದ ಮೂಲಕ ಬಾಗಿನ ಸಮರ್ಪಿಸಿದರು.

Advertisement

ತಾಲೂಕಿನ ಬನ್ನಿಮಂಗಲ ಕೆರೆಗೆ 1998ರಲ್ಲಿ ಕೆರೆತುಂಬಿ ಕೋಡಿ ಹರಿದಿದ್ದು ಬಿಟ್ಟರೆ ಇದೀಗ ಉತ್ತಮ ಮಳೆಯಿಂದ ಬನ್ನಿಮಂಗಲ ಕೆರೆ ಕೋಡಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಬನ್ನಿಮಂಗಲ ಅಮಾನಿಕೆರೆ ಹೀಗೆ ಸುಮಾರು ಐದು ಹಳ್ಳಿಗಳ ಗಡಿವ್ಯಾಪ್ತಿಗೆ ಬರುವ ಕೆರೆ ಇದಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿರುವುದು ಸಂತಸ ತಂದಿದೆ. ಮೂವತ್ತು ವರ್ಷಗಳಲ್ಲಿ ಬೀಳದಂತಹ ಮಳೆ ಈ ಬಾರಿ ಹೆಚ್ಚು ಬೀಳುವಂತಾಗಿದೆ. ಬಯಲು ಸೀಮೆಯಲ್ಲಿ ಸುರಿಯುತ್ತಿರುವ ಮಳೆ ನಮಗೆಲ್ಲಾ ಹರ್ಷ ತಂದಿದೆ. ಇದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ ಎಂದರು.

ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ, ಪ್ರಕೃತಿ ಮಾತೆಯ ಮೇಲೆ ಜನರ ದುರಾಚಾರದಿಂದ ಪ್ರಕೃತಿ ಮುನಿಸಿಕೊಂಡು ಭೂಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಅನಾಹುತ ಸಂಭವಿಸುತ್ತಿದೆ. ಮನುಷ್ಯರಾದ ನಾವು ಈಗಲಾದರು ಹೆಚ್ಚೆತ್ತುಕೊಂಡು ಕುಡಿಯುವ ನೀರು, ಗಾಳಿ, ಶುದ್ಧ ಆಹಾರ ಮತ್ತು ಪ್ರಕೃತಿ ಉಳಿಸಿಕೊಂಡು ಕಾಪಾಡಬೇಕಿದೆ ಎಂದು ಹೇಳಿದರು.

ಕೆರೆ ಕಲುಷಿತವಾಗದಂತೆ ಜಾಗ್ರತೆ ವಹಿಸಿ: ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ವರುಣನ ಕೃಪೆಯಿಂದ ಬಾರಿ ಸಾಕಷ್ಟು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿರುವುದು ಸ್ವಾಗತಾರ್ಹವಾಗಿದ್ದು, ಕೆರೆ ಕಲುಷಿತವಾಗದಂತೆ ಜಾಗ್ರತೆ ವಹಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಕೆರೆಗಳು ನಮ್ಮ ಜೀವನಾಡಿ. ಅವುಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್‌ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್‌, ಕುರಿ ಮತ್ತು ಉಣ್ಣೆ ಜಿಲ್ಲಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮುನೇಗೌಡ, ಅಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮರಾಮಣ್ಣ, ಉಪಾಧ್ಯಕ್ಷೆ ಕಾಂತಮುನಿರಾಜು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಟಾಲಪ್ಪ, ಚನ್ನಕೃಷ್ಣಪ್ಪ, ಚನ್ನಹಳ್ಳಿ ಬಿ.ರಾಜಣ್ಣ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಮುನಿರಾಜು, ರಾಮಣ್ಣ, ಲಕ್ಷ್ಮಣ್‌, ನೀಲೇರಿ ಮಂಜುನಾಥ್‌, ಲಕ್ಷ್ಮೀಕಾಂತ್‌, ವಿ.ನಾರಾಯಣಸ್ವಾಮಿ, ಪಿಡಿಒ ನಂದಿನಿ, ಗ್ರಾಪಂ ಸದಸ್ಯ ರಘು, ಅಂಬಿಕಾಪ್ರಭು, ಜಯಲಕ್ಷ್ಮಮ್ಮ, ಮೂರ್ತಿ, ಮುನಿನಂಜಪ್ಪ, ಮುನಿರಾಜು, ಚಿಕ್ಕಮುನಿಶಾಮಪ್ಪ, ಮೀನಾಕೃಷ್ಣಮೂರ್ತಿ, ಮುಖಂಡ ಅನಿಲ್‌, ನವೀನ್‌, ಮುನೇಶ್‌, ರಮೇಶ್‌, ಮೈಸೂರು ಆಂಜಿನಪ್ಪ, ಚಂದ್ರಣ್ಣ, ಮಂಜುನಾಥ್‌, ಚನ್ನಕೃಷ್ಣಪ್ಪ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next