Advertisement

ಇಬ್ಬರು ಪೊಲೀಸ್‌ ಬೇಹುಗಾರರ ಹತ್ಯೆ: ಉಲ್ಫಾ

09:14 PM May 07, 2022 | Team Udayavani |

ಗುವಾಹಟಿ: ಅಸ್ಸಾಂನ ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಫಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬೇಹುಗಾರಿಕೆ ಕೆಲಸ ಮಾಡಿದ್ದರಿಂದ ತನ್ನಿಬ್ಬರು ಕಾರ್ಯಕರ್ತರನ್ನು ಕೊಂದಿರುವುದಾಗಿ ತಿಳಿಸಿದೆ.

Advertisement

ಧನಜಿತ್‌ ದಾಸ್‌ ಮತ್ತು ಸಂಜಿಬ್‌ ಶರ್ಮರನ್ನು ಪೊಲೀಸರೇ ಸಂಘಟನೆಯೊಳಗೆ ಬೇಹುಗಾರರನ್ನಾಗಿ ತೂರಿಸಿದ್ದರು. ಧನಜಿತ್‌ ಏ.24ರಂದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ, ಮರುದಿನ ಸಿಕ್ಕಿಬಿದ್ದಿದ್ದಾರೆ.

ಇವರು ಪೊಲೀಸರಿಗೆ ಸಂಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದರು, ಹಾಗೆಯೇ ಇತರರನ್ನು ಶರಣಾಗಲು ಪ್ರೇರಿಸುತ್ತಿದ್ದರು ಎಂದು ಉಲ್ಫಾ ಹೇಳಿದೆ.

ಇನ್ನೊಂದು ಕಡೆ ಸೇನೆಯಲ್ಲಿ ಕಮ್ಯಾಂಡೊ ಆಗಿದ್ದ ಅಪೂರ್ಬ ಕುಮಾರ್‌ ಶರ್ಮ ಮಣಿಪುರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದರು. ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಸಂಜಿಬ್‌ ಶರ್ಮ ಪೊಲೀಸ್‌ ಅಣತಿಯಂತೆಯೇ ಈ ಕಾರ್ಯಕ್ಕೆ ಸೇರಿಕೊಂಡಿದ್ದಾರೆ. ಇದರಲ್ಲಿ ಯಶಸ್ವಿಯಾದರೆ 1 ಕೋಟಿ ರೂ. ನೀಡುವುದಾಗಿ ತನಗೆ ಪೊಲೀಸರು ತಿಳಿಸಿದ್ದರು ಎಂದೂ ಸಂಜಿಬ್‌ ವಿಡಿಯೊ ಒಂದರಲ್ಲಿ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next