Advertisement

ಬಂಕಾಪುರ: ಸಾಯಿ ಭಕ್ತರಿಗೆ ಪ್ರತಿಜ್ಞಾ ವಿಧಿ

05:30 PM May 12, 2018 | |

ಬಂಕಾಪುರ: ಪಟ್ಟಣದ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಯುವಕ, ಯುವತಿಯರು ಶ್ರೀ ಶಿರಡಿ ಸಾಯಿಮಂದಿರದ ಅಧ್ಯಕ್ಷ ರವೀಂದ್ರ ವೇರ್ಣೆಕರ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀ ಶಿರಡಿ ಸಾಯಿ ಮಂದಿರದ ಸದಸ್ಯರು ಗುರುವಾರ ರಾತ್ರಿ ಸಾಯಿ ಬಾಬಾಗೆ ವಿಶೇಷ ಪೂಜೆ ಸಲ್ಲಿಸಿ ಸಾಯಿಬಾಬಾ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ತಪ್ಪದೆ ಮತದಾನ ಮಾಡುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಕೂಲಿ, ಪ್ರಜಾಪ್ರಭತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನೀವು ಚಲಾಯಿಸುವ ಒಂದೊಂದು ಮತ ಸದೃಢವಾದ ಸರಕಾರ ರಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ಜಾಗೃತಿ: ಶ್ರೀ ಪುಟ್ಟರಾಜ ಗವಾಯಿ ವಿವಿಧೋದ್ದೇಶ ಸಹಕಾರಿ ಸಂಘದವರು ಸಾರ್ವಜನಿಕರು ತುಂಬುವ ಪಿಗ್ಮಿ ರಶೀದಿಯಲ್ಲಿ ನಮ್ಮ ಓಟು ನಮ್ಮ ಹಕ್ಕು, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ತಪ್ಪದೆ ಮತ ಚಲಾಯಿಸಿ ಎಂದು ಮುದ್ರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಮಂಜುನಾಥ ವಳಗೇರಿ, ವೆಂಕಟೇಶ ದೈವಜ್ಞ, ಸತೀಶ ವಳಗೇರಿ, ಚಂದ್ರಶೇಖರ ಕೋರಿ, ರವಿ ಕುರಗೋಡಿ, ಮಂಜುನಾಥಗೌಡ ಪಾಟೀಲ, ರಾಘವೇಂದ್ರ ದೈವಜ್ಞ, ಚಂದ್ರಕಾಂತ ರಾಯ್ಕರ, ಪರಶುರಾಮ ಭವಾನಿ, ಬಸವರಾಜ ನರೇಗಲ್ಲ, ಪರಶುರಾಮ ಜೋಗಿನ, ರೇಣುಕಾ ಕೋರಿ, ಗಾಯತ್ರಿ ಜಾವೂರ, ಮಧುಮತಿ ಶಿಡ್ಲಾಪುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next