ನವದೆಹಲಿ/ಮುಂಬೈ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಉತ್ತೇಜನಾತ್ಮಕ ಕ್ರಮಗಳಿಂದಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಬ್ಯಾಂಕ್‌ಗಳ ಸಾಲ ನೀಡಿಕೆ ಮತ್ತು ವಿತ್ತೀಯ ನೆರವು ನೀಡುವ ಪ್ರಮಾಣ ಶೇ.11-ಶೇ.12ರಷ್ಟು ಏರಿಕೆಯಾಗುವ ಸಾಧ್ಯತೆಗಳು ಇವೆ.
ಹೀಗೆಂದು ರೇಟಿಂಗ್ಸ್ ಸಂಸ್ಥೆ ಕ್ರೈಸಿಲ್ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂದರೆ 200-300 ಬೇಸಿಸ್ ಪಾಯಿಂಟ್ಸ್‌ಗಳು ಹೆಚ್ಚಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯ ಡೆಪ್ಯುಟಿ ಚೀಫ್ ರೇಟಿಂಗ್ ಆಫೀಸರ್ ಕೃಷ್ಣನ್ ಸೀತಾರಾಮನ್ ಕಾರ್ಪೊರೇಟ್ ಸಾಲ ನೀಡಿಕೆ ಕ್ಷೇತ್ರದಲ್ಲಿ ಶೇ. 8ರಿಂದ ಶೇ. 9ರಷ್ಟು ಏರಿಕೆಯಾಗಲಿದೆ. ನಿಕಟಪೂರ್ವ ವಿತ್ತೀಯ ವರ್ಷಕ್ಕಿಂತ ಇದು ದ್ವಿಗುಣವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ 13 ವಲಯಗಳಿಗೆ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಧನ ನೀಡಿಕೆ (ಪಿಎಲ್‌ಐ) ಜಾರಿ ಮಾಡಿದ್ದು ಭಾರೀ ಪ್ರಯೋಜನ ಕಂಡುಬರಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ವಿತ್ತೀಯ ನೆರವೂ ಕೂಡ ಬ್ಯಾಂಕ್‌ಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ನೀಡುವ ಸಾಲದ ಪ್ರಮಾಣ ಕೂಡ ಶೇ.12-ಶೇ.14ರ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಗೃಹ ನಿರ್ಮಾಣ ಕ್ಷೇತ್ರಕ್ಕೆ ನೀಡಲಾಗುವ ಸಾಲ ಪ್ರಮಾಣವೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಮುನ್ನೋಟ ನಿರೀಕ್ಷೆ ಹೊಂದಿದ್ದಾರೆ.