Advertisement

ಬ್ಯಾಂಕ್‌ಗಳ ಹೆಚ್ಚಿನ ವಹಿವಾಟಿಗೆ 150 ರೂ. ಶುಲ್ಕ

03:45 AM Mar 02, 2017 | |

ನವದೆಹಲಿ: ಡಿಜಿಟಲೀಕರಣ ಹಾಗೂ ನಗದು ರಹಿತ ವಹಿವಾಟು ವ್ಯವಸ್ಥೆ ಜಾರಿಗೆ ಬಂದ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್ಸಿ, ಐಸಿಐಸಿಐ, ಆಕ್ಸಿಸ್‌ ಸೇರಿದಂತೆ ಉಳಿದ ಬ್ಯಾಂಕ್‌ಗಳು ನಿರೀಕ್ಷೆಯಂತೆಯೇ ಉಚಿತ ವಹಿವಾಟುಗಳ ನಂತರದ ಪ್ರತಿ ವ್ಯವಹಾರಕ್ಕೆ ಶುಲ್ಕ ನಿರ್ಧರಿಸಿದೆ. ಪರಿಷ್ಕೃತ ವ್ಯವಸ್ಥೆ ಗುರುವಾರದಿಂದಲೇ ಜಾರಿಗೆ ಬರಲಿದೆ.

Advertisement

ನಾಲ್ಕು ವಹಿವಾಟುಗಳ ನಂತರದ ಪ್ರತಿ ವ್ಯವಹಾರಕ್ಕೆ 150 ರೂ.ಗಳನ್ನು ನಿಗದಿಗೊಳಿಸಲಾಗಿದೆ. ಅಲ್ಲದೆ, ಎಚ್‌ಡಿಎಫ್ಸಿ ಬ್ಯಾಂಕ್‌ ಮೂರನೇ ವ್ಯಕ್ತಿಗೆ ಸಂಬಂಧಿಸಿದ ವ್ಯವಹಾರದ ಮಿತಿಯನ್ನು 25,000ಕ್ಕೆ ನಿಗದಿಗೊಳಿಸಿದೆ.

ಎಲ್‌ಪಿಜಿ ಬೆಲೆ 86 ರೂ. ಏರಿಕೆ
ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ 86 ರೂ. ಏರಿಕೆಯಾಗಿದ್ದು, ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಈ ಬದಲಾವಣೆಯಿಂದಾಗಿ 14.2 ಕಿಲೋಗ್ರಾಂ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ಈಗ 737.50 ರೂ. ಆಗಿದೆ. ಈ ಪ್ರಕಟಣೆಗೂ ಮೊದಲು ಪ್ರತಿ ಸಿಲಿಂಡರ್‌ನ ಬೆಲೆ 651.50 ರೂ. ಆಗಿತ್ತು.

2016 ಅಕ್ಟೋಬರ್‌ ಬಳಿಕ ನಿರಂತರವಾಗಿ ಬೆಲೆ ಹೆಚ್ಚಳ ಆಗುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಹೆಚ್ಚಾಕಡಿಮೆ 300 ರೂ. ಏರಿಕೆಯಾಗಿದೆ. ತೈಲ ಸಂಸ್ಥೆಗಳೂ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ ಮೇಲಿನ ದರವನ್ನು 13 ಪೈಸೆ ಹೆಚ್ಚಿಸಿದ್ದು, 14.2 ಕಿಲೋಗ್ರಾಂ ಸಿಲಿಂಡರ್‌ ಬೆಲೆ ಈಗ 434.93 ರೂ. ಆಗಿದೆ. ಇದರಂತೆ ಟರ್ಬೈನ್‌ ಇಂಧನ (ಎಟಿಎಫ್) ದರದಲ್ಲಿಯೂ ಹೆಚ್ಚಳವಾಗಿದ್ದು, ಪ್ರತಿ ಕಿಲೋಲೀಟರ್‌ನ ಬೆಲೆ 214 ರೂ. ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next