ನವದೆಹಲಿ:ಸಾಲಗಾರರ ಒಪ್ಪಿಗೆಯನ್ನು ಪಡೆಯದೇ ಬ್ಯಾಂಕುಗಳು ಗೃಹ ಸಾಲದ ಬಡ್ಡಿದರಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ದೆಹಲಿ ಗ್ರಾಹಕ ಆಯೋಗ ತೀರ್ಪು ನೀಡಿದೆ. ಈ ರೀತಿ ಬಡ್ಡಿದರಗಳನ್ನು ಸ್ವಯಂ ಆಗಿ ಬದಲಾವಣೆ ಮಾಡುವುದು ಅಹಿತಕರ ವ್ಯಾಪಾರ ದೃಷ್ಟಿಕೋನವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:ಪದವಿ ಸೇರಿ 18+ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ : ಡಿಸಿಎಂ
ಜಸ್ಟೀಸ್ ಸಂಗೀತಾ ಧೀಂಗ್ರಾ ನೇತೃತ್ವದ ಗ್ರಾಹಕ ಆಯೋಗ, ಗೃಹ ಸಾಲದ ಬಡ್ಡಿ ಬದಲಾದ ಬಗ್ಗೆ ಬ್ಯಾಂಕ್ ಗಳು ಸಾಲಗಾರರಿಗೆ ಮಾಹಿತಿ ನೀಡಬೇಕು. ಅಲ್ಲದೇ ಬಡ್ಡಿದರ ಬದಲಾವಣೆ ಬಗ್ಗೆ ಸಾಲಗಾರರ ಒಪ್ಪಿಗೆ ಪಡೆಯಬೇಕು ಎಂಬುದನ್ನು ಹೇಳಿದೆ.
2015ರ ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಷ್ಟ್ರೀಯ ಗ್ರಾಹಕ ವೇದಿಕೆಯ 2019ರ ತೀರ್ಪನ್ನು ಉಲ್ಲೇಖಿಸಿರುವ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ನ ಅನುಮೋದನೆಯ ಪ್ರಕಾರ ಸಾಲದ ಮೇಲಿನ ಬಡ್ಡಿದರದ ಏರಿಳಿತದ ಬಗ್ಗೆ ವಾದಿಸುವುದಿಲ್ಲ ಎಂದು ತಿಳಿಸಿದೆ.
ಬ್ಯಾಂಕ್ ನಿಂದ ಸಾಲ ಪಡೆಯುವ ವ್ಯಕ್ತಿಯೂ ಕೂಡಾ ಸಾಲದ ಪಡೆಯುವ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಸಾಲ ಮರುಪಾವತಿ ಅವಧಿಯ ಬಡ್ಡಿದರ ಬದಲಾವಣೆ ಬಗ್ಗೆಯೂ ಒಪ್ಪಿಕೊಂಡಿರಬೇಕು. ಆದರೂ ಬದಲಾದ ಬಡ್ಡಿದರದ ಬಗ್ಗೆ ಸಾಲಗಾರನಿಗೆ ತಿಳಿಸಬೇಕು ಎಂದು ಆಯೋಗ ತನ್ನ ವಾದಕ್ಕೆ ಸಮರ್ಥನೆ ನೀಡಿರುವುದಾಗಿ ವರದಿ ಹೇಳಿದೆ.