Advertisement

ಡಿಡಿಗೆ ಚೆಕ್‌: ಹೈ ನೋಟಿಸ್‌

01:10 AM Jan 25, 2019 | |

ಬೆಂಗಳೂರು: ಅಲ್ಪ ಮೊತ್ತದ “ಡಿಮ್ಯಾಂಡ್‌ ಡ್ರಾಫ್ಟ್’ಗಳಿಗೂ(ಡಿ.ಡಿ) ಚೆಕ್‌ ಅಥವಾ ಬ್ಯಾಂಕ್‌ ಖಾತೆಗೆ ಬೇಡಿಕೆ ಇಡುತ್ತಿದ್ದ ಸಾರ್ವಜನಿಕ ವಲಯ, ವಾಣಿಜ್ಯ ಬ್ಯಾಂಕುಗಳ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಆರ್‌ಬಿಐಗೆ ರಾಜ್ಯ ಹೈಕೋರ್ಟ್‌ ನೋಟಿಸ್‌ ನೀಡಿದೆ.

Advertisement

ಈ ಕುರಿತು ವಕೀಲ ಎಲ್‌. ರಮೇಶ್‌ ನಾಯಕ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯಪೀಠ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಆರ್‌ಬಿಐ, ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಷನ್‌ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು.

ಆರ್‌ಬಿಐನ ಕೆವೈಸಿ ಡೈರೆಕ್ಷನ್‌-2016 ಪ್ರಕಾರ 50 ಸಾವಿರ ರೂ.ವರೆಗಿನ ಡಿಮ್ಯಾಂಡ್‌ ಡ್ರಾಫ್ಟ್ಗಳಿಗೆ ನಗದು ಸ್ವೀಕರಿಸಲು ಅವಕಾಶವಿದೆ. ಆದರೆ ಆರ್‌ಬಿಐನ ಈ ನಿಯಮವನ್ನು ಸಾರ್ವಜನಿಕ ವಲಯದ ಬಹುತೇಕ ಬ್ಯಾಂಕುಗಳು ಪಾಲಿಸುತ್ತಿಲ್ಲ. 100, 200, 500 ಮತ್ತು ಸಾವಿರ ರೂಪಾಯಿ ಅಲ್ಪ ಮೊತ್ತದ ಡಿ.ಡಿಗಳಿಗೂ ನಗದು ಸ್ವೀಕರಿಸಲು ನಿರಾಕರಿಸಿ ಚೆಕ್‌ ಕೊಡಬೇಕು ಅಥವಾ ಅದೇ ಶಾಖೆಯಲ್ಲಿ ಖಾತೆ ಹೊಂದಿರಬೇಕು ಎಂದು ಹೇಳಿ ಗ್ರಾಹಕರಿಗೆ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕೆಂಬುದು ಅರ್ಜಿದಾರರ ವಾದ. ಗ್ರಾಹಕರಿಗೆ ಆಗುತ್ತಿರುವ ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆರ್‌ಬಿಐನ ಓಂಬಡ್ಸ್‌ಮನ್‌, ಬೆಂಗಳೂರಿನಲ್ಲಿರುವ ಆರ್‌ಬಿಐ ಪ್ರಾದೇಶಿಕ ನಿರ್ದೇಶಕರು ಮತ್ತು ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಷನ್‌ಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆರ್‌ಬಿಐ ನಿಯಮ ಪಾಲನೆ ಮಾಡದೆ ಸಾರ್ವಜನಿ ಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬ್ಯಾಂಕುಗಳ ವಿರುದಟಛಿ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳಿಗೆ 50 ಸಾವಿರ ದೊಳಗಿನ ಮೊತ್ತದ ಡಿ.ಡಿಗೆ ನಗದು ಸ್ವೀಕರಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಪೀಠವನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next