Advertisement

ಬಂಕಾಪುರ ಪುರಸಭೆ ಚುನಾವಣೆ ಮುಂದೂಡಿಕೆ

02:12 PM May 09, 2019 | Team Udayavani |

ಬಂಕಾಪುರ: ಪಟ್ಟಣದ ಪುರಸಭೆ ಅವೈಜ್ಞಾನಿಕ ವಾರ್ಡ್‌ಗಳ ವಿಂಗಡಣೆ ವಿರೋಧಿಸಿ ಸ್ಥಾಯಿ ಸಮಿತಿ ಮಾಜಿ ಸದಸ್ಯ ಮಹಬಳೇಶ ಹೊನಕೇರಿ ಕೋರ್ಟ್‌ ಮೇಟ್ಟಲೇರಿದ ಕಾರಣ ಮೇ 29 ರಂದು ನಡೆಯಬೇಕಾಗಿದ್ದ ಪುರಸಭೆ ಚುನಾವಣೆಗೆ ಬ್ರೇಕ್‌ ಬಿದ್ದಂತಾಗಿದೆ.

Advertisement

ಮಾ. 2014 ರಲ್ಲಿ ಅಸ್ತಿತ್ವಕ್ಕೆ ಬಂದ ಹಿಂದಿನ ಪುರಸಭೆ ಆಡಳಿತ ಮಂಡಳಿಯ ಅಧಿಕಾರ ಅವಧಿ, 2019ರ ಮಾ.27 ರಂದು ಕೊನೆಗೊಂಡಿದೆ. ಏಪ್ರಿಲ್ನಲ್ಲಿ ನಡೆಯಬೇಕಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲೇ ಲೋಕಸಭೆ ಚುನಾವಣೆ ಬಂದಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿತ್ತು. ಈಗಾಗಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶ ಬರುವ ಮೊದಲೇ ಚುನಾವಣೆ ಆಯೋಗ ಮೇ 29 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದೆ. ಆದರೆ, ಪಟ್ಟಣದ ಪುರಸಭೆ ಇತ್ತಿಚೆಗೆ ನಡೆಸಿದ ವಾರ್ಡ್‌ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಳೇಶ ಹೊನಕೇರಿ ಕೋರ್ಟ್‌ಗೆ ಮೋರೆ ಹೋಗಿರುವುದರಿಂದ ಬಂಕಾಪುರ ಪುರಸಭೆ ಚುನಾವಣೆ ಮುಂದುಡಲಾಗಿದೆ. ಇದರಿಂದ ಪುರಸಭೆ ಸದಸ್ಯರಾಗಲು ಹಾತೋರೆಯುತ್ತಿದ್ದ ಆಕಾಂಕ್ಷಿಗಳ ಆಸೆಗೆ ತಣ್ಣೀರೇರಚಿದಂತಾಗಿದೆ.

2018ರಲ್ಲಿ ಅಧಿಕಾರ ಅವಧಿ ಮುಕ್ತಾಯವಾಗುವ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದ ಮೇಲೆ ವಾರ್ಡ್‌ಗಳ ಪುನರ್‌ ವಿಂಗಡಣೆ ಮಾಡಿಕೊಳ್ಳಬೇಕಾದರೆ, ಕೆಲವು ನಿಯಮ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಪುರಸಭೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅರ್ಹತೆ ಇಲ್ಲದ, ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಂದ ತಮ್ಮ ಅನಕೂಲತಕ್ಕಂತೆ ಅವೈಜ್ಞಾನಿಕವಾಗಿ ವಾರ್ಡ್‌ಗಳನ್ನು ವಿಭಜಿಸಿದ್ದಾರೆ.

ಸುಮಾರು 16,500 ಮತದಾರರನ್ನು ಹೊಂದಿರುವ ಪಟ್ಟಣದಲ್ಲಿ 23 ವಾರ್ಡಗಳಿವೆ. ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಒಟ್ಟು ಮತಗಳನ್ನು ವಾರ್ಡಗಳ ಸಂಖ್ಯೆಯಿಂದ ಭಾಗಿಸಿದಾಗ ಬರುವ ಮತದಾರರ ಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಮತದಾರರನ್ನು ವಿಂಗಡಿಸಬೇಕಿತ್ತು. ಆದರೆ, ಒಂದು ವಾರ್ಡಿನಲ್ಲಿ 4 ನೂರು ಮತದಾರರನ್ನು ಹೊಂದಿದರೆ, ಮತ್ತೂಂದು ವಾರ್ಡಿನಲ್ಲಿ 9 ನೂರು ಮತದಾರರಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕ ಪದ್ಧತಿ. ಪ್ರಭಾವಿ ವ್ಯಕ್ತಿಗಳಿಗೆ ಅನಕೂಲ ಮಾಡಿಕೊಡುವ ಉದ್ದೇಶ ಇದಾಗಿದೆ ಎಂದು ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಬಳೆಶ ಹೊನಕೇರಿ ಹೈಕೋರ್ಟ್‌ ಮೇಟ್ಟಲೇರಿದ್ದರಿಂದ ಚುನಾವಣೆ ಆಯೋಗ ಬಂಕಾಪುರ ಪುರಸಭೆ ಚುನಾವಣೆಯನ್ನು ತಡೆ ಹಿಡಿದಿದೆ. ಚುನಾವಣೆ ಆಕಾಂಕ್ಷಿಗಳು ಮುಂದಿನ ಆದೇಶ ಮತ್ತು ಚುನಾವಣೆ ಆಯೋಗ ಚುನಾವಣೆಯನ್ನು ನಿಗದಿಪಡಿಸುವ ವರೆಗೆ ಕಾಯಬೇಕಾದ ಅನಿವಾರ್ಯತೆ ಬಂದೋದಗಿದೆ.

ಬಂಕಾಪುರ ಪುರಸಭೆ ಚುನಾವಣೆ ತಡೆ ಹಿಡಿದಿರುವ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
•ಹರ್ಸಲ್ ನಾರಾಯಣರಾವ್‌ ಬೋಯರ್‌,ಸವಣೂರ ಉಪವಿಭಾಗಾಧಿಕಾರಿ

Advertisement

ಜವಾಬ್ದಾರಿಯುತ ಅಧಿಕಾರಿಗಳಿಂದ ಮಾಡಿಸಬೇಕಾಗಿದ್ದ ವಾರ್ಡ್‌ ವಿಂಗಡಣೆ ಗುತ್ತಿಗೆ ಆಧಾರಿತ ನೌಕರರಿಂದ ಮಾಡಿಸಲಾಗಿದೆ. ಈ ವಿಷಯದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
•ಮಹಬಳೇಶ ಹೊನಕೇರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ವಾರ್ಡ್‌ಗಳ ವಿಂಗಡಣೆಯಾಗಿಲ್ಲ. ಪ್ರತಿ ವಾರ್ಡ್‌ಗಳಿಗೆ ಸರಾಸರಿ ಮತಗಳು ವಿಂಗಡಣೆಯಾಗಬೇಕಾಗಿರುವುದರಿಂದ ವಾರ್ಡ್‌ ವಿಭಜನೆ ಪುನರ್‌ ಪರಿಷ್ಕರಣೆಯಾಗಬೇಕು.
•ಸೋಮಶೇಖರ ಗೌರಿಮಠ, ಪುರಸಭೆ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next