Advertisement

ಇಂದು ಬ್ಯಾಂಕ್‌ ಮುಷ್ಕರ

06:00 AM Dec 21, 2018 | Team Udayavani |

ನವದೆಹಲಿ: ವೇತನ ಪರಿಷ್ಕರಣೆ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ, ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ(ಎಐಬಿಒಸಿ) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬ್ಯಾಂಕ್‌ಗಳು ಮುಚ್ಚಿರಲಿವೆ. 

Advertisement

ಮತ್ತೂಂದೆಡೆ, ಡಿ. 26ರಂದು ಮುಷ್ಕರ ನಡೆಸಲು ಯುನೈಟೆಡ್‌ ಫೋರಂ ಆಫ್ ಬ್ಯಾಂಕ್ಸ್‌ ಯೂನಿಯನ್‌ (ಯುಎಫ್ಬಿಯು) ಕರೆ ನೀಡಿದೆ. ಹಾಗಾಗಿ, ಈ ಮುಷ್ಕರಗಳು ಸೇರಿದಂತೆ 4ನೇ ಶನಿವಾರ, ಭಾನುವಾರ, ಕ್ರಿಸ್ಮಸ್‌ ಕಾರಣಗಳಿಂದಾಗಿ ಬ್ಯಾಂಕುಗಳಿಗೆ ಶುಕ್ರವಾರದಿಂದ ಬುಧವಾರದವರೆಗೆ (ಡಿ. 24 ಸೋಮವಾರ ಹೊರತುಪಡಿಸಿ) ಸಾಲು ರಜೆಗಳು ಇರಲಿವೆ. ಆದರೆ, ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next