Advertisement

ಮಹಿಳೆಯರಿಗೆ ‘ಬ್ಯಾಂಕ್ ಆಫ್ ಬರೋಡಾ’ದಿಂದ ಮಹಿಳಾ ದಿನಾಚರಣೆಯ ವಿಶೇಷ ಆಫರ್..!

02:24 PM Mar 08, 2021 | Team Udayavani |

ನವ ದೆಹಲಿ : ನೀವು ಒಂದು ವೇಳೆ ನೀವೂ ಕೂಡ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ  ಅಂಗವಾಗಿ ಮನೆಯಲ್ಲಿರುವ ನಿಮ್ಮ ತಾಯಿ, ಸಹೋದರಿ, ಮಡದಿ, ಮಗಳು ಅಥವಾ ಗೆಳತಿಗೆ ಗಿಫ್ಟ್ ನೀಡಲು ಯೋಚಿಸುತಿದ್ದರೆ, ನೀವು ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆಯಬಹುದಾಗಿದೆ. ನೀವು ಅವರಿಗೆ ನೀಡುವ ಈ ಕೊಡುಗೆ ಚಿರಕಾಲ ಅವಿಸ್ಮರಣೀಯವಾಗಿರಲಿದೆ ಎನ್ನುವುದಕ್ಕೆ ಸಂಶಯಬೇಕಾಗಿಲ್ಲ.

Advertisement

ಓದಿ : ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಮಹಿಳಾ ಗ್ರಾಹಕರಿಗಾಗಿ ವಿಶೇಷ ಆಫರ್ ವೊಂದನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ ಈ ಖಾತೆಗೆ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ಎಂದು ಹೆಸರಿಡಲಾಗಿದೆ. ಬ್ಯಾಂಕ್ ಆಫ್ ಬರೋಡಾ ತನ್ನ  ಅಧಿಕೃತ ವೆಬ್ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ, ಮಹಿಳಾ ಗ್ರಾಹಕರು ಒಂದು ವೇಳೆ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್  ತೆರೆದರೆ, ಅವರಿಗೆ ಖಾತೆ ತೆರೆಯುವ ವೇಳೆ ಪ್ಲಾಟಿನಂ ಕಾರ್ಡ್ ಜೊತೆಗೆ 2 ಲಕ್ಷ ರೂ.ಗಳ ವೈಯಕ್ತಿಕ ಇನ್ಸೂರೆನ್ಸ್ ಲಾಭ ಸಿಗಲಿದೆ. ಈ ಖಾತೆ ತೆರೆದ ಬಳಿಕ ತಮ್ಮ ಖಾತೆಯ ಮೂಲಕ ಮಹಿಳೆಯರು ಪಡೆಯುವ ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ಯಾವುದೇ ರೀತಿಯ ನಿರ್ವಹಣಾ ವೆಚ್ಚ ತೆಗೆದುಕೊಳ್ಳುವುದಿಲ್ಲ.

ಇತರ ಯಾವ ಯಾವ ರಿಯಾಯಿತಿಗಳು ಸಿಗುತ್ತವೆ?

ಬ್ಯಾಂಕ್ ಆಫ್ ಬರೋಡಾ ಮಹಿಳಾ ಗ್ರಾಹಕರು ಒಂದು ವೇಳೆ ತಮ್ಮ ಖಾತೆಗೆ ಲಾಕರ್ ಸೌಲಭ್ಯ ಪಡೆದರೆ, ಅವರಿಗೆ ವಾರ್ಷಿಕ ರೆಂಟ್ ಕೂಡ ಕಡಿಮೆ ಬೀಳಲಿದೆ. ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ ಮಹಿಳೆಯರಿಗೆ ಅತಿ ಕಮ್ಮಿ ಬಡ್ಡಿ ದರದಲ್ಲಿ ದ್ವಿಚಕ್ರ ವಾಹನ ಸಾಲ ಹಾಗೂ ಶೈಕ್ಷಣಿಕ ಸಾಲ ಕೂಡ ಲಭಿಸುತ್ತದೆ. ಇದಲ್ಲದೆ ಬ್ಯೂಟಿ, ಲೈಫ್ ಸ್ಟೈಲ್ ಹಾಗೂ ಗ್ರಾಸರಿಗಳ ಮೇಲೆ ಆಕರ್ಷಕ ಕೊಡುಗೆಗಳು ಕೂಡ ಲಭ್ಯ ಇರಲಿವೆ.

Advertisement

ಓದಿ : ಪುರುಷನೆ ಅಪರಾಧಿ, ಮಹಿಳೆಯೆ ಸಂತ್ರಸ್ತೆ ಎಂಬ ಮನಃಸ್ಥಿತಿಯಿಂದ ಹೊರಬರುವುದು ಅನಿವಾರ್ಯ.!?

ಆದರೆ ಮಹಿಳೆಯರಿಗಾಗಿಯೇ ಇರುವ ಈ ವಿಶೇಷ ಖಾತೆಯಲ್ಲಿ ಮಹಿಳೆಯರು (ಪ್ರತಿ ತಿಂಗಳು ಖಾತೆಯಲ್ಲಿ 300 ರೂ.ಕನಿಷ್ಠ ಹಣ ಉಳಿಸಿಕೊಳ್ಳುವುದು ಅವಶ್ಯವಾಗಿದೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ರೂ.150 ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಮಹಿಳಾ ಶಕ್ತಿ ಸೇವಿಂಗ್ ಖಾತೆಯ ವಿಶೇಷ ಸೌಲಭ್ಯಗಳೇನು..?

*ವಾರ್ಷಿಕ ಲಾಕರ್ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ.

*70 ವರ್ಷ ವಯಸ್ಸಿನವರೆಗೆ ಉಚಿತ 2 ಲಕ್ಷ ರೂ.ಗಳ ಆಕ್ಸಿಡೆಂಟಲ್  ವಿಮೆ ಸಿಗಲಿದೆ.

*ಖಾತೆ ತೆರೆದ ಮೇಲೆ ಒಂದು ವರ್ಷದ ಅವಧಿಯವರೆಗೆ ಉಚಿತ ಎಸ್ ಎಮ್ ಎಸ್ ಸೇವೆ.

*ದ್ವಿಚಕ್ರ ವಾಹನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.25 ರಷ್ಟು ರಿಯಾಯಿತಿ.  ಆಟೋ ಹಾಗೂ ಮಾರ್ಗೆಜ್ ಸಾಲ ಪಡೆಯುವಾಗ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.25ರಷ್ಟು ಕಡಿತ.

*ಪರ್ಸನಲ್ ಲೋನ್ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ.

*ಸ್ವೀಪ್ ಸೌಕರ್ಯ ಸಿಗಲಿದೆ. 50 ಸಾವಿರಕ್ಕಿಂತ ಅಧಿಕ ಮೊತ್ತದ ಠೇವಣಿ ಮೇಲೆ ರೂ.10,000 ಗುಣಕದಲ್ಲಿ 181 ದಿನಗಳಿಗಾಗಿ ಸ್ವೀಪ್ ಸೌಕರ್ಯ ಸಿಗಲಿದೆ.

*ಟ್ರಾವೆಲ್ ಹಾಗೂ ಗಿಫ್ಟ್ ಕಾರ್ಡ್ ಶುಲ್ಕದಲ್ಲಿ ಶೇ.25ರಷ್ಟು ವಿನಾಯಿತಿ.

*ಮೊದಲ ವರ್ಷದಲ್ಲಿ ತಗಳುತ್ತಿದ್ದ ಡಿಮ್ಯಾಟ್ ಖಾತೆಯ ನಿರ್ವಹಣಾ ವೆಚ್ಚ ಅಂದರೆ ಎ ಎಮ್ ಸಿ ಶುಲ್ಕವನ್ನು ತೆಗೆದುಹಾಕಲಾಗಿದೆ.

*ಬ್ಯಾಂಕ್ ಆಫ್ ಬರೋಡಾ ಇಜೀ ಕ್ರೆಡಿಟ್ ಕಾರ್ಡ್ ಗೆ ಯಾವುದೇ ರೀತಿಯ ಜಾಯಿನಿಂಗ್ ಶುಲ್ಕ ಇಲ್ಲ.

ಓದಿ : ಕರ್ನಾಟಕ ಬಜೆಟ್ 2021: ಮಹಿಳೆಯರಿಗೆ ಬಂಪರ್ ಯೋಜನೆ ಘೋಷಣೆ, ಶೇ.4ರ ಬಡ್ಡಿದರದಲ್ಲಿ 2 ಕೋಟಿ ಸಾಲ

Advertisement

Udayavani is now on Telegram. Click here to join our channel and stay updated with the latest news.

Next