ಚೆನ್ನೈ: ಗುರುವಾರ ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆಯಾಗಿ ಪೂರ್ತಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.
ಅಣ್ಣಾಸಲೈ ಪ್ರದೇಶದಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ಒಂದು ಅದರಲ್ಲಿ ಸಿಲುಕಿಕೊಂಡಿತ್ತು. ಅದನ್ನು ಕಂಡ ಖಾಸಗಿ ಬ್ಯಾಂಕ್ ಮ್ಯಾನೇಜರ್ ಜಿನ್ನಾ ತಕ್ಷಣ ತಮ್ಮ ಬೈಕನ್ನು ಬದಿಯಲ್ಲಿ ನಿಲ್ಲಿಸಿ, ನಾಲ್ಕು ಕಿ.ಮೀ ನಡೆದು, ಟ್ರಾಫಿಕ್ ಮಧ್ಯದಲ್ಲೇ ದಾರಿ ಮಾಡಿ, ಆ್ಯಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು
ಅವರ ಸಮಯಪ್ರಜ್ಞೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಜೀವ ಉಳಿದಿದೆ. ಜಿನ್ನಾ ಅವರು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುತ್ತಿದ್ದುದನ್ನು ಆ್ಯಂಬುಲೆನ್ಸ್‌ನಲ್ಲಿದ್ದ ಒಬ್ಬರು ವಿಡಿಯೋ ಮಾಡಿದ್ದಾರೆ. ಆಸ್ಪತ್ರೆ ತಲುಪಿದ ನಂತರ ಅದರ ಚಾಲಕ ಜಿನ್ನಾರೊಂದಿಗೆ ಫೋಟೋವನ್ನೂ ತೆಗೆಸಿಕೊಂಡಿದ್ದಾರೆ. ಈ ವಿಚಾರ ಎಲ್ಲೆಡೆ ಹರಿದಾಡಿದೆ.