Advertisement
ಗೋವಾದ ಮಾಪ್ಸಾದಲ್ಲಿ ಇಂಥ ಅಪರೂಪದ ಘಟನೆ ನಡೆದಿದೆ. ಬ್ಯಾಂಕ್ ಲಾಕರ್‌ನಲ್ಲಿ ಪಾಲಕರು ಕೂಡಿಟ್ಟಿದ್ದ 500 ಹಾಗೂ 1000 ರೂ. ಮುಖಬೆಲೆಯ ಸುಮಾರು 3 ಕೋಟಿ ರೂ. ಮಕ್ಕಳಿಗೆ ಸಿಗದೆ ವ್ಯರ್ಥವಾಗಿದೆ. ನೋಟು ಅಮಾನ್ಯಿàಕರಣದಿಂದ ಈ ಹಣಕ್ಕೆ ಈಗ ಬೆಲೆಯೇ ಇಲ್ಲವಾಗಿದ್ದು, ಹೆತ್ತವರು ಕೂಡಿಟ್ಟ ಹಣದಲ್ಲಿ ಒಂದು ಪೈಸೆ ಕೂಡ ಮಕ್ಕಳಿಗೆ ಸಿಗದಂತಾಗಿದೆ. ಲಾಕರ್‌ಗಳಲ್ಲಿ ಹಣ ನೋಡಿ ಬ್ಯಾಂಕ್ ಅಧಿ ಕಾರಿಗಳೂ ಗೊಂದಲಕ್ಕೀಡಾಗಿದ್ದಾರೆ.
ಗೋವಾದ ಬಾರದೇಸ್ ತಾಲೂಕಿನ ವ್ಯಕ್ತಿಯೊಬ್ಬರು 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ಪತ್ನಿ ಮೊದಲೇ ತೀರಿ ಹೋಗಿದ್ದರು. ಮಕ್ಕಳು ವಿದೇಶದಲ್ಲಿದ್ದರು. ಈ ದಂಪತಿ ಮಾಪ್ಸಾದ ಬ್ಯಾಂಕ್‌ನಲ್ಲಿ ಮೂರು ಲಾಕರ್‌ಗಳನ್ನು ತೆರೆದು ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಅಪಾರ ಪ್ರಮಾಣದ ಹಣ ಇರಿಸಿದ್ದರು. ಎರಡು ಲಾಕರ್‌ಗಳನ್ನು ತನ್ನ ಹೆಸರಿನಲ್ಲಿದ್ದರೆ, ಇನ್ನೊಂದನ್ನು ಪತ್ನಿ ಹೆಸರಿನಲ್ಲಿತ್ತು. ಪತ್ನಿ ನಿಧನದ ನಂತರ ಆ ಲಾಕರ್‌ನ್ನು ಕೂಡ ಇವರೇ ನಿರ್ವಹಿಸುತ್ತಿದ್ದರು. 12 ವರ್ಷದ ಬಳಿಕ ಲಾಕರ್ ಓಪನ್:
ತಂದೆ ತೀರಿ ಹನ್ನೆರಡು ವರ್ಷಗಳ ಬಳಿಕ ಮಕ್ಕಳು ವಿದೇಶದಿಂದ ಆಗಮಿಸಿ ಗೋವಾದಲ್ಲಿನ ಆಸ್ತಿ ಮಾರಲು ನಿರ್ಧರಿಸಿದ್ದರು. ತಂದೆ-ತಾಯಿ ವಾಸವಿದ್ದ ಮನೆಯ ಪರಿಶೀಲನೆ ವೇಳೆ ಮಕ್ಕಳಿಗೆ ಬ್ಯಾಂಕ್ ದಾಖಲೆ, ಲಾಕರ್ ಕೀಗಳು ಸಿಕ್ಕಿವೆ. ನಂತರ ಮಕ್ಕಳು ಸಂಬಂಧಪಟ್ಟ ಬ್ಯಾಂಕ್ ಅ ಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬ್ಯಾಂಕ್ ಅ ಧಿಕಾರಿಗಳು ಲಾಕರ್ ಹೊಂದಿರುವವರ ಮೂಲ ವಾರಸುದಾರರಿಗೆ ಅದನ್ನು ತೆರೆಯಲು ಅವಕಾಶ ನೀಡಿದ್ದಾರೆ.
Related Articles
ಮೇ 6ರಂದು ಲಾಕರ್ ತೆರೆಯಲಾಗಿದೆ. ಅದರಲ್ಲಿ 500 ಮತ್ತು 1000 ರೂ. ಮುಖಬೆಲೆಯ ಸುಮಾರು 3 ಕೋಟಿ ರೂ. ಪತ್ತೆಯಾಗಿದೆ. ಇದನ್ನು ಕಂಡು ಮಕ್ಕಳು ಹಾಗೂ ಅಧಿಕಾರಿಗಳು ದಂಗಾಗಿದ್ದಾರೆ. ಏಕೆಂದರೆ ನೋಟು ಅಮಾನ್ಯಿàಕರಣದಿಂದಾಗಿ ಇವೆಲ್ಲ ಈಗ ಕೇವಲ ಕಾಗದದ ಚೂರುಗಳಾಗಿವೆ ಹೊರತು ಯಾವ ಬೆಲೆಯೂ ಇಲ್ಲವಾಗಿದೆ.
Advertisement
ಕೈಗೆ ಬಂದ ತುತ್ತು ಬಾಯಿಗಿಲ್ಲ:2019ರ ನ.8ರಂದು ಕೇಂದ್ರ ಸರ್ಕಾರ 500 ರೂ.ಮತ್ತು 1000 ರೂ.ನೋಟುಗಳನ್ನು ಅಮಾನ್ಯಗೊಳಿಸಿರುವುದಾಗಿ ಘೋಷಿಸಿತ್ತು. ಆದರೆ ಲಾಕರ್‌ನಲ್ಲಿ ಇಷ್ಟೆಲ್ಲ ಹಣವಿದೆ ಎಂಬ ವಿಷಯವೇ ಗೊತ್ತಿಲ್ಲದ ಮಕ್ಕಳು ತಮ್ಮ ಪೋಷಕರು ಕೂಡಿಟ್ಟ ಹಣ ನೋಡಿ ಮಮ್ಮಲ ಮರುಗಿದ್ದಾರೆ. ಬೆಲೆಬಾಳುವ ಒಡವೆಗಳಲ್ಲೇ ತೃಪ್ತಿಪಟ್ಟುಕೊಂಡಿದ್ದಾರೆ. ತಮ್ಮ ತಂದೆ-ತಾಯಿ ತಮಗಾಗಿ ಇಷ್ಟು ದೊಡ್ಡ ಮೊತ್ತದ ಹಣ ಬಿಟ್ಟು ಹೋಗಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಲಾಕರ್‌ನಲ್ಲಿ ನೋಟುಗಳ ಬಂಡಲ್ ನೋಡಿದಾಗ ಮೊದಲು ನಂಬಲಾಗಲಿಲ್ಲ. ಮೊದಲೇ ತಿಳಿದಿದ್ದರೆ 2019ರಲ್ಲಿ ಸರ್ಕಾರ ನೋಟು ಅಮಾನ್ಯಿàಕರಣ ಜಾರಿಗೊಳಿಸಿದಾಗಲೇ ಕಾನೂನುಬದ್ಧವಾಗಿ ಈ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.