Advertisement

9 ಸಾವಿರ ಕೋಟಿ ಆಸ್ತಿ ಜಪ್ತಿ

02:09 AM Jun 27, 2019 | mahesh |

ಹೊಸದಿಲ್ಲಿ: ಉದ್ಯಮಿ ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯ ಪ್ರಕರಣದ ಅನಂತರದಲ್ಲಿ ಇದೀಗ ಮತ್ತೂಂದು ಮಹತ್ವದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸ್ಟೆರ್ಲಿಂಗ್‌ ಬಯೋಟೆಕ್‌ನ 9 ಸಾವಿರ ಕೋಟಿ ರೂ. ಮೌಲ್ಯದ ಸ್ವತ್ತನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಔಷಧ ಕಂಪೆನಿ ಸ್ಟೆರ್ಲಿಂಗ್‌ ವಿರುದ್ಧ ಈಗಾಗಲೇ ಹಣಕಾಸು ದುರ್ಬಳಕೆ ಪ್ರಕರಣ ದಾಖಲಾಗಿತ್ತು. ಕಂಪೆನಿಯ ಸಂಸ್ಥಾಪಕರಾದ ಚೇತನ್‌ ಸಂದೇಸರ ಮತ್ತು ನಿತಿನ್‌ ಸಂದೇಸರ ಹಾಗೂ ಇತರರ ವಿರುದ್ಧ 2017 ಆಗಸ್ಟ್‌ನಲ್ಲಿ ದೂರು ದಾಖಲಾಗಿತ್ತು. ವಿವಿಧ ಬ್ಯಾಂಕ್‌ಗಳಿಂದ 5,700 ಕೋಟಿ ರೂ. ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ.

Advertisement

ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲವನ್ನು ಪಡೆಯುವ ಉದ್ದೇಶದಿಂದ ಕಂಪೆನಿ ಬ್ಯಾಲೆನ್ಸ್‌ ಶೀಟ್ ಅನ್ನು ಸಂದೇಸರ ಸೋದರರು ತಿದ್ದಿದ್ದರು. ಸಾಲ ಪಡೆದ ಅನಂತರ ನಕಲಿ ಕಂಪೆನಿಗಳ ಮೂಲಕ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದರು. ಸ್ವಂತ ಉದ್ದೇಶಕ್ಕೆ ಈ ಹಣವನ್ನು ಅವರು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟು ಸಾಲ 8100 ಕೋಟಿ ರೂ. ಆಗಿದ್ದು, 2004-20112ರ ಅವಧಿಯಲ್ಲಿ 5700 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕ್‌ಗಳು ನೀಡಿದ್ದವು. ಬ್ಯಾಂಕ್‌ ಸಾಲವನ್ನು ಪಡೆದು ಮೋಸ ಮಾಡುವದಕ್ಕೆಂದೇ ಹಲವು ದೇಶಗಳಲ್ಲಿ 100ಕ್ಕೂ ಹೆಚ್ಚು ಕಂಪೆನಿಗಳನ್ನು ಇವರು ಸ್ಥಾಪಿಸಿದ್ದರು.

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಲ್ಲಿ ಮೂಲದ ಉದ್ಯಮಿ ಹಾಗೂ ದಲ್ಲಾಳಿ ಗಗನ್‌ ಧವನ್‌ ಸಹಿತ ನಾಲ್ವರನ್ನು ಬಂಧಿಸಿದೆ. ಅಷ್ಟೇ ಅಲ್ಲ, ಇದೇ ಹಗರಣದಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿ ಹಾಗೂ ಸಂದೇಸರ ಸೋದರರ ಅಳಿಯ ಹಿತೇಶ್‌ ಪಟೇಲ್ನನ್ನು ಅಲ್ಬೇನಿಯಾದ ರಾಜಧಾನಿ ತಿರಾನಾದಿಂದ ಮಾರ್ಚ್‌ 22ರಂದು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next