Advertisement
ಆನ್ ಲೈನ್ ಮೂಲಕ ವ್ಯವಹರಿಸುವಾಗ ಕನಿಷ್ಠ ಸುರಕ್ಷಾ ನಿಯಮ ಪಾಲಿಸದಿದ್ದರೆ ಬ್ಯಾಂಕುಗಳ ವೆಬ್ ಸೈಟ್ ಎಷ್ಟೇ ಭದ್ರವಾಗಿದ್ದರೂ ಕನ್ನ ಹಾಕುವವರಿಗೆ ಕೀಲಿ ಕೈ ಕೊಟ್ಟಂತಾಗುತ್ತದೆ.
Related Articles
Advertisement
ಆನ್ ಲೈನ್ ಬ್ಯಾಂಕಿಗ್ ಗೆ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕೆಗಳು:
ಪಬ್ಲಿಕ್ ವೈಫೈನಲ್ಲಿ ಹಣ ವ್ಯವಹಾರ ಬೇಡ: ಹಣಕಾಸು ವ್ಯವಹಾರವನ್ನು ಪಬ್ಲಿಕ್ ವೈಫೈ ಅಥವಾ ಅಸುರಕ್ಷಿತ ವೈಫೈ ನಲ್ಲಿ ಮಾಡಲೇಬೇಡಿ . ಪಬ್ಲಿಕ್ ವೈಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್ ಗಳ ಕೈಯಲ್ಲಿ ಸಿಲುಕಿದಂತೆ. ಅದ್ದರಿಂದ ಬಳಕೆ ಮಾಡುವಾಗ ಎಚ್ಚರವಿರಲಿ.
ಪಾಸ್ ವರ್ಡ್ ನಿಯಮಿತವಾಗಿ ಬದಲಾಯಸಿ: ಅತೀ ಸರಳ ವಿಧಾನವೆಂದರೇ ಪಾಸ್ ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವುದು. ಪಾಸ್ ವರ್ಡ್ ನಲ್ಲಿ ನಿಮ್ಮ ಹೆಸರು. ಆಪ್ತರ ಹೆಸರು, ಹುಟ್ಟಿದ ದಿನಾಂಕ. ಮೊಬೈಲ್ ಸಂಖ್ಯೆ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಪಾಸ್ ವರ್ಡ್ ಯಾವಾಗಲೂ ಅಕ್ಷರ ಮತ್ತು ಸಂಖ್ಯೆಯ ಕಾಂಬಿನೇಷನ್ ನನ್ನು ಹೊಂದಿರಲಿ.
ಇಮೇಲ್ ಲಿಂಕ್ ಗಳಿಂದ ನೆಟ್ ಬ್ಯಾಂಕಿಂಗ್ ಸೈನ್ಇನ್ ಬೇಡ: ಎಲ್ಲರೂ ಮಾಡುವ ಸಾಮಾನ್ಯ ತಪ್ಪೆಂದರೆ ಯಾರಾದರೂ ಲಿಂಕ್ ಕಳುಹಿಸಿದ ತಕ್ಷಣ ಅದರ ಮೂಲಕ ಲಾಗಿನ್ ಆಗುವುದು. ಇದರಿಂದ ನಿಮ್ಮ ಮಾಹಿತಿಗಳು ಹ್ಯಾಕರ್ ಗಳಿಗೆ ಸುಲಭವಾಗಿ ಸಿಗುತ್ತದೆ. ಇಮೇಲ್ ನಲ್ಲಿ ಶೇ . 90 ರಷ್ಟು ಮಾಹಿತಿ ಗಳು ಸ್ಪ್ಯಾಮ್ ಆಗುತ್ತವೆ ಎಂಬ ಮಾಹಿತಿ ಇದೆ.
ಕಾಲಕಾಲಕ್ಕೆ ಖಾತೆಯನ್ನು ಪರೀಕ್ಷಿಸಿ: ನೆಟ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆದ ತಕ್ಷಣ ಲಾಸ್ಟ್ ಲಾಗ್ ಇನ್ ಆದ ಪ್ಯಾನೆಲ್ ಚೆಕ್ ಮಾಡಿ. ಸರಿಯಾದ ನೆಟ್ ವರ್ಕ್ ಇಲ್ಲದಿದ್ದರೆ ಆನ್ ಲೈನ್ ಬ್ಯಾಂಕಿಂಗ್ ನಡೆಸಲೇಬಾರದು. ಯುಪಿಐ ಪಾಸ್ ವರ್ಡ್ ಮತ್ತು ಪಿನ್ ನಂಬರ್ ಕ್ಲಿಷ್ಟಕರವಾಗಿದ್ದರೆ ಒಳಿತು. ಪ್ಯಾಡ್ ಲಾಕ್ ಆಗಿರುವ ಸುರಕ್ಷಿತ ವೆಬ್ ಸೈಟ್ ನ್ನೆ ಹೆಚ್ಚಾಗಿ ಬಳಸಬೇಕು.
ನೆಟ್ ಬ್ಯಾಕಿಂಗ್ ಮಾಡುವಾಗ ನೀವು ಬಳಸುತ್ತಿರುವ ವೆಬ್ ಸೈಟ್ ಸೆಕ್ಯೂರ್ ಆಗಿವೆಯೇ ಎಂದು ಪರಿಶೀಲಿಸಿ. ವೆಬ್ ಸೈಟ್ URL ನಲ್ಲಿ http ಎಂಬಲ್ಲಿ https ಇದೆಯಾ ಎಂದು ಖಚಿತಪಡಿಸಿಕೊಳ್ಳಿ. S ಎಂಬುದು ಸೆಕ್ಯೂರ್ ಎಂಬರ್ಥವನ್ನು ನೀಡುತ್ತದೆ.
ಸ್ವೈಪಿಂಗ್ ಮಶೀನ್ ಮತ್ತು ಎಟಿಎಂನಲ್ಲಿ ಇದೇ ರೀತಿಯ ಎಚ್ಚರ ವಹಿಸುವುದು ಸೂಕ್ತ. ಕಾರ್ಡ್ ಕ್ಲೋನರ್ (ತದ್ರೂಪು), ಕಾರ್ಡ್ ಸ್ಕಿಮ್ಮರ್, ರಹಸ್ಯ ಕ್ಯಾಮಾರಗಳ ಮೂಲಕ ಎಟಿಎಂ ಪಿನ್ ಗಳನ್ನು ಸುಲಭವಾಗಿ ನಕಲು ಮಾಡಬಹುದು.
ಇ- ಬ್ಯಾಂಕ್ ವ್ಯವಹಾರ ಮುಗಿದ ತಕ್ಷಣ ಲಾಗೌಟ್ ಮಾಡುವುದು ಅವಶ್ಯ. ಲಾಗೌಟ್ ಮಾಡದಿದ್ದರೇ ಹ್ಯಾಕರ್ ಗಳು ಮಾಹಿತಿಯನ್ನು ಸುಲಭವಾಗಿ ಕದಿಯುವ ಸಾಧ್ಯತೆಯಿರುತ್ತದೆ. ಇಲ್ಲವೇ ಯಾರಾದರೂ ತಪ್ಪಿ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಾತ್ರಲ್ಲದೆ ಬ್ಯಾಂಕಿನ ಅಧಿಕೃತ ಆ್ಯಪ್ ಗಳನ್ನು ಬಳಸುವುದು ಹೆಚ್ಚು ಸೂಕ್ತ. ಆ್ಯಂಟಿ ವೈರಸ್ ಗಳನ್ನು ಅಪಡೇಟ್ ಮಾಡಿ ಮೊಬೈಲ್ ಮತ್ತು ಪಿಸಿ ಗಳನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳ ಬೇಕಾಗುವುದು. ಬೇರೆಯವರ ಡಿವೈಸ್ ಬಳಕೆ ಮಾಡುವಾಗಲೂ ಇದೇ ಎಚ್ಚರಿಕೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕೀ ಲಾಗರ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ನಿಮ್ಮ ಪಾಸ್ ವರ್ಡ್ ಸೇವ್ ಮಾಡಿಕೊಳ್ಳುವ ಅವಕಾಶವೂ ಇದೆ.
ಯಾವುದರಿಂದ ಹೆಚ್ಚು ಉಪಯೋಗವಿರುತ್ತದೆಯೋ ಯಾವುದನ್ನು ಹೆಚ್ಚು ಜನರು ಬಳಸುತ್ತಾರೋ ಅದನ್ನೇ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥಿತ ಜಾಲವೂ ಇರುತ್ತದೆ. ಎಚ್ಚರ ತಪ್ಪಿ ಮೋಸ ಹೋಗುವ ಮುನ್ನ ಸುರಕ್ಷತಾ ಕ್ರಮಗಳನ್ನು ಬಳಸಿ ನಿಮ್ಮ ಆನ್‌ಲೈನ್ ಬ್ಯಾಂಕಿಂಗ್‌ನ್ನು ಸುರಕ್ಷಿತವಾಗಿ ನಡೆಸುವುದು ಒಳಿತು.
ಮಿಥುನ್ ಮೊಗೇರ