Advertisement

ಇಮ್ರಾನ್‌ ಖಾನ್‌ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ

11:16 AM Jun 27, 2022 | Team Udayavani |

ನವದೆಹಲಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಕೊಠಡಿಯಲ್ಲಿ ಬೇಹು ಸಾಧನವೊಂದನ್ನು ಅಳವಡಿಸಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

Advertisement

ಇಸ್ಲಾಮಾಬಾದ್‌ನ ಬನಿ ಗಾಲಾದಲ್ಲಿರುವ ಇಮ್ರಾನ್‌ ನಿವಾಸದಲ್ಲಿ ಈ ಬೆಳವಣಿಗೆ ನಡೆದಿದೆ. ಪತ್ತೇದಾರಿ ಸಾಧನವನ್ನು ಗುಪ್ತವಾಗಿ ಅಳವಡಿಸಲು ಯತ್ನಿಸುತ್ತಿದ್ದುದ್ದನ್ನು ಗಮನಿಸಿದ ಇನ್ನೊಬ್ಬ ಸಿಬ್ಬಂದಿ ಬನಿ ಗಾಲಾ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಬಂಧಿಸಿ, ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಯುತ್ತಿದೆ. ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್‌ ಖಾನ್‌ ಅವರ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ಈಗಾಗಲೇ ಗುಮಾನಿಗಳೆದ್ದಿವೆ. ಅದರ ನಡುವೆಯೇ ಈ ಬೆಳವಣಿಗೆ ನಡೆದಿರುವುದರಿಂದ ಪರಿಸ್ಥಿತಿ, ವದಂತಿಗಳು ಸತ್ಯ ಎಂಬ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next