Advertisement
ಘಟನೆಗೆ ಸಂಬಂಧಿಸಿದಂತೆ ಕೆಲವು ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಕಾನೂನು ಕ್ರಮ ಜರಗಿ ಸಲು ಮುಂದಾಗಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತು ಕೈಗೊಂಡಿದ್ದಾರೆ. ಆದರೆ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಮಂಗಳವಾರ ರಾತ್ರಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸುವ ಜತೆಗೆ ಅಶ್ರುವಾಯು ಕೂಡ ಪ್ರಯೋಗಿಸಿದ್ದರು.
ತಲುಪಿದ್ದು, ಬಸ್‌ನಲ್ಲಿದ್ದ ಕಾರ್ಯ ಕರ್ತರು ಜೈಕಾರ ಕೂಗಿದಾಗ ಅದನ್ನು ತಡೆಯೊಡ್ಡಲು ಇನ್ನೊಂದು ಗುಂಪು ಯತ್ನಿಸಿದಾಗ ಘರ್ಷಣೆ ಆರಂಭ ವಾಯಿತು ಎನ್ನಲಾಗಿದೆ. ಈ ವೇಳೆ, ಬಸ್ ಮೇಲೆ ಕಲ್ಲು ತೂರಾಟವಾದಾಗ ಬಸ್ ಒಳಗಡೆ ಕುಳಿತಿದ್ದವರು ಮತ್ತು ಅಲ್ಲಿಗೆ ಬಂದ ಇನ್ನೊಂದು ತಂಡದವರ ಮಧ್ಯೆ ಘರ್ಷಣೆ ಸಂಭವಿಸಿದೆ. ಬಳಿಕ ಗಲಾಟೆ ಜೋರಾದಾಗ ಪೊಲೀಸರು ಬಂದು ಲಾಠಿ ಪ್ರಹಾರ ಮಾಡಿ ಎರಡೂ ಗುಂಪಿನವರನ್ನು ಚದುರಿಸಿದರು. ಈ ವೇಳೆ ಘಟನಾ ಸ್ಥಳದಲ್ಲಿ ಕಲ್ಲು ತೂರಾಟ ಕೂಡ ನಡೆದಿದೆ ಎನ್ನಲಾಗಿದೆ.
Related Articles
Advertisement
ಈ ಘಟನೆಯಲ್ಲಿ ಎರಡೂ ಗುಂಪುಗಳ ಒಟ್ಟು ನಾಲ್ವರು ಗಾಯಗೊಂಡಿ ದ್ದಾರೆ. ಕೆಲವು ಮಂದಿ ಪೊಲೀಸರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ರಾತ್ರಿ ಕತ್ತಲು ಇದ್ದ ಕಾರಣ ಕೃತ್ಯ ಎಸಗಿದವರ ಗುರುತು ಪತ್ತೆ ತತ್‌ಕ್ಷಣಕ್ಕೆ ಸಾಧ್ಯ ವಾಗಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
10 ಮಂದಿಗೆ ಗಾಯ ಈ ಘಟನೆಯಲ್ಲಿ ಆರು ಮಂದಿ ಪೊಲೀಸರ ಸಹಿತ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ. ಇತ್ತಂಡಗಳ ರಾಹುಲ್, ಲೋಕೇಶ್, ವಿಪಿನ್ ಮತ್ತು ಆಮಿರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ಮತ್ತು ಸೋಡಾ ಬಾಟ್ಲಿ ಎಸೆತದಿಂದಾಗಿ ಪೊಲೀಸ್ ವಾಹನಗಳಲ್ಲಿದ್ದ ಪಣಂಬೂರು ಎಸಿಪಿ, ರಾಜೇಂದ್ರ ಡಿ.ಎಸ್., ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್, ಸಬ್ ಇನ್ಸ್‌ಪೆಕ್ಟರ್ ಪೂವಪ್ಪ, ಎಎಸ್‌ಐ ಉಮೇಶ್ ಸಹಿತ ನಾಲ್ಕು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಸಿಬಂದಿ ಗಾಯಗೊಂಡಿದ್ದಾರೆ. ಪೊಲೀಸರ ಒಂದು ಸಾಗರ್ ವಾಹನ ಮತ್ತು ಒಂದು ಜೀಪ್‌ಗೆ ಹಾನಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 5 ಪ್ರಕರಣ ದಾಖಲು
ಈ ಘರ್ಷಣೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಒಟ್ಟು 5 ಎಫ್‌ಐಆರ್‌ಗಳು ದಾಖಲಾಗಿವೆ. ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆ, ಕಲ್ಲು ತೂರಾಟ, ಪೊಲೀಸ್ ವಾಹನಕ್ಕೆ ಕಲ್ಲೆಸೆದು ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಘಟನೆಗಳು ಇದರಲ್ಲಿ ಸೇರಿವೆ. ಈ ನಡುವೆ, ಘಟನೆ ಸಂಬಂಧ ಕೆಲವು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ. ಆದರೆ ಯಾರನ್ನೂ ಇಲ್ಲಿವರೆಗೆ ಬಂಧಿ
ಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಖಂಡನೆ
ಮಂಗಳೂರು/ಉಡುಪಿ:ಕಾರ್ಯಕರ್ತರ ಬಸ್ಸುನ್ನು ನಗರದ ಬೆಂಗ್ರೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿರುವುದನ್ನು ವಿಹಿಂಪ, ಬಜರಂಗ ದಳ ಖಂಡಿಸಿದೆ. ಜತೆಗೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸುವಂತೆ ಬಜರಂಗ ದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಪ್ರವೀಣ್ ಕುತ್ತಾರ್ ಹಾಗೂ ಮೀನುಗಾರರ ಸಮಾವೇಶದ ಸಂಚಾಲಕ ಯಶ್‌ಪಾಲ್ ಸುವರ್ಣ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.