ಐಜ್ವಾಲ್ : ಬಾಂಗ್ಲಾದೇಶ ಮೂಲದ ಬಂಡುಕೋರ ಸಂಘಟನೆಯಾದ ಕುಕಿ-ಚಿನ್ ನ್ಯಾಷನಲ್ ಆರ್ಮಿ (ಕೆಸಿಎನ್‌ಎ) ಗೆ ಸೇರಿದ 29 ವರ್ಷದ ಉಗ್ರನನ್ನು ಅಸ್ಸಾಂ ರೈಫಲ್ಸ್ ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯಲ್ಲಿ ಬಂಧಿಸಿದೆ ಎಂದು ಅರೆಸೇನಾ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
Advertisement
ದಂಗೆಕೋರನನ್ನು ಫಾಲಿಯನ್ಸಾಂಗ್ ಬಾಮ್ ಎಂದು ಗುರುತಿಸಲಾಗಿದ್ದು, ಬಂಗ್ಟ್ಲಾಂಗ್ ಗ್ರಾಮದ ಮನೆಯೊಂದರಲ್ಲಿ ಕೆಲಕಾಲ ತಂಗಿದ್ದ ಎಂದು ಹೇಳಿಕೆ ತಿಳಿಸಿದೆ.
ಸುಳಿವಿನ ಮೇರೆಗೆ ಅಸ್ಸಾಂ ರೈಫಲ್ಸ್ ಸಿಬಂದಿ ಶುಕ್ರವಾರ ಮನೆಯ ಮೇಲೆ ದಾಳಿ ನಡೆಸಿ ಉಗ್ರನನ್ನು ಬಂಧಿಸಿ, ಆತನನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.