Advertisement

Bangladesh; ಸುಧಾರಣೆ ಬಳಿಕವೇ ಚುನಾವಣೆ: ಯೂನುಸ್‌ ಘೋಷಣೆ

01:28 AM Aug 20, 2024 | Team Udayavani |

ಢಾಕಾ: ಬಾಂಗ್ಲಾದ ಚುನಾವಣ ಆಯೋಗ, ನ್ಯಾಯಾಂಗ, ಭದ್ರತೆ ಮತ್ತು ಆಡಳಿತದಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ತಂದು ಅನಂತರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸ ಲಾಗುವುದು ಎಂದು ಬಾಂಗ್ಲಾ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಘೋಷಿಸಿದ್ದಾರೆ.

Advertisement

ಈ ಮೂಲಕ ಸಾರ್ವತ್ರಿಕ ಚುನಾವಣೆ ಮತ್ತಷ್ಟು ವಿಳಂಬವಾಗುವ ಸುಳಿವು ನೀಡಿದ್ದಾರೆ. ಏತನ್ಮಧ್ಯೆ, ಢಾಕಾದಲ್ಲಿ ಪೊಲೀಸ್‌ ಇಲಾಖೆಗೆ ಯೂನುಸ್‌ ಸರಕಾರಿ ಸರ್ಜರಿ ನಡೆಸಿದೆ. 32 ಪೊಲೀಸ್‌ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಈವರೆಗೆ ಒಟ್ಟು ವರ್ಗಾವಣೆಗೊಂಡ ಪೊಲೀಸರ ಸಂಖ್ಯೆ 50ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next