Advertisement
ಬಾಂಗ್ಲಾ ಪರಿಸ್ಥಿತಿ ಬಗ್ಗೆ ಭಾರತದ ನಿಲುವು ಏನು ಎಂದು ಪ್ರಧಾನಿ ಮೋದಿ ಸಂಸತ್‌ನಲ್ಲಿ ಹೇಳಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಅಂತಾರಾಷ್ಟ್ರೀಯ ಶಾಂತಿ ಸ್ಥಾಪನಾ ಪಡೆಯನ್ನು ಬಾಂಗ್ಲಾಕ್ಕೆ ಕಳುಹಿಸುವಂತೆ ವಿಶ್ವ ಸಂಸ್ಥೆಗೆ ಭಾರತ ಮನವಿ ಮಾಡಬೇಕು ಎಂದೂ ಹೇಳಿದ್ದಾರೆ.
ಬಾಂಗ್ಲಾ ದಲ್ಲಿ ಹಿಂದೂಗಳ ಮೇಲೆ ದಾಳಿ ತಡೆ ಯದೇ ಹೋದರೆ ಮುಂದಿನ ವಾರದಿಂದ ಬಾಂಗ್ಲಾಕ್ಕೆ ಸರಕು ಸಾಗಣೆಯಾಗುವ ಎಲ್ಲ ಗಡಿಯನ್ನೂ ಮುಚ್ಚುತ್ತೇವೆ ಎಂದು ಪ.ಬಂಗಾಲ ವಿಪಕ್ಷ ನಾಯಕ ಸುವೇಂಧು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾ ಹೈಕಮಿಷನ್ ಕಚೇರಿ ಮೇಲೆ ದಾಳಿ
ಬಾಂಗ್ಲಾ ನಡೆ ಖಂಡಿಸಿ ತ್ರಿಪುರಾದ ಅಗರ್ತಲಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಅಲ್ಲಿ ರುವ ಬಾಂಗ್ಲಾದ ಸಹಾಯಕ ಹೈ ಕಮಿಷನ್ ಕಚೇರಿಗೆ ನುಗ್ಗಿ, ದಾಳಿ ನಡೆಸಿದ್ದಾರೆ. ಈ ಬಗ್ಗೆ ಬಾಂಗ್ಲಾ ಆಕ್ಷೇಪಿಸಿದ್ದು, ಭಾರತ ಕೂಡ ವಿಷಾದ ವ್ಯಕ್ತಪಡಿಸಿದೆ.