Advertisement

ಭಾರತಕ್ಕೆ ಬಂದಾಗ ಅಸ್ವಸ್ಥ; ಹೋಗುವಾಗ ಗುಣಮುಖ

11:04 AM Nov 21, 2017 | Team Udayavani |

ಕೃಷ್‌ನಗರ್‌: ಭಾರತದ ಗಡಿ ದಾಟಿ ಬಂದ ಬಾಂಗ್ಲಾದೇಶದ ಯುವಕನೊಬ್ಬ 2 ವರ್ಷಗಳ ಬಳಿಕ ಕಡೆಗೂ ತಮ್ಮ ಮನೆ ಸೇರಿದ್ದಾರೆ. ವಿಷಯ ಇಷ್ಟೇ ಅಲ್ಲ. ಭಾರತದ ಒಳ ಬರುವಾಗ ಮಾನಸಿಕ ಅಸ್ವಸ್ಥನಾಗಿದ್ದ ಆತ ಈಗ ಸಂಪೂರ್ಣ ಗುಣಮುಖರಾಗಿ ದೇಶಕ್ಕೆ ಮರಳಿದ್ದಾರೆ. ಇದರ ಹಿಂದಿರುವುದು ಎನ್‌ಜಿಒ ಒಂದರ ಮುಖ್ಯಸ್ಥರೊಬ್ಬರ ಮಾನವೀಯತೆ.

Advertisement

ಮಾಮುನ್‌ ರಶೀದ್‌ 2015ರಲ್ಲಿ ಭಾರತದೊಳಗೆ ಬಂದಿದ್ದು, ನುಸುಳುಕೋರ ಎಂದು ಶಂಕಿಸಿ ಈತನನ್ನು ಬಂಧಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಯಿತು. ನಂತರ ಮೊಸ್ಲೆಂ ಮುನ್ಶಿ ಎಂಬುವವರ “ನಕಶಿ
ಪಾರ ಹೃದಯ್‌ ಸಮಿತಿ’ ಎಂಬ ಎನ್‌ಜಿಒಗೆ ಕಳುಹಿಸಲಾಯಿತು. ಮುನ್ಶಿ ಅವರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ರಶೀದ್‌ ಸಂಪೂರ್ಣ ಗುಣಮುಖನಾಗಿದ್ದಾನೆ. ಕೇವಲ 4 ತಿಂಗಳಲ್ಲಿ ತನ್ನ ಹೆಸರು, ವಿಳಾಸ ಹೇಳುವಂತಾಗಿದ್ದು, ಸದ್ಯದಲ್ಲೇ ಬಾಂಗ್ಲಾಗೆ ಮರಳಲಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next